ರೈನಾ, ಹೃತಿಕ್ ಪತ್ನಿ, ಸಿಂಗರ್ ರಾಂಧವ್ ಬಂಧನ

304

ಪ್ರಜಾಸ್ತ್ರ ಸುದ್ದಿ

ಮುಂಬೈ: ನಗರದ ವಿಮಾನ ನಿಲ್ದಾಣದ ಹತ್ತಿವಿರುವ ಮುಂಬೈ ಡ್ರ್ಯಾಗನ್ ಫ್ಲೈ ಕ್ಲಬ್ ಮೇಲೆ ದಾಳಿ ನಡೆಸಿದ ಪೊಲೀಸರು, ಇಂಡಿಯನ್ ಕ್ರಿಕೆಟ್ ಟೀಂ ಮಾಜಿ ಆಟಗಾರ ಸುರೇಶ ರೈನಾ, ಬಿಟೌನ್ ನಟ ಹೃತಿಕ್ ರೋಷನ್ ಪತ್ನಿ ಸುಸೇನ್ ಖಾನ್, ಸಿಂಗರ್ ಗುರು ರಾಂಧವ್ ರನ್ನ ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಅನುಮತಿ ಪಡೆದ ಅವಧಿಗಿಂತ ಹೆಚ್ಚು ಕಾಲ ಕ್ಲಬ್ ತೆರೆದಿರುವುದು, ಕೋವಿಡ್ 19 ನಿಯಮಗಳನ್ನ ಉಲ್ಲಂಘನೆ ಮಾಡಿರುವ ಆರೋಪದ ಮೇಲೆ ಕ್ಲಬ್ ನ 7 ಜನ ಸದಸ್ಯರು ಸೇರಿದಂತೆ 34 ಮಂದಿಯನ್ನ ಬಂಧಿಸಲಾಗಿದೆ. ನಂತರ ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಸಹರ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಡಿಸೆಂಬರ್ 22ರಿಂದ ಜನವರಿ 5ರ ತನಕ ಮಹಾರಾಷ್ಟ್ರದಲ್ಲಿ ಹೊಸ ವರ್ಷದ ಸಂಭ್ರಾಮಾಚರಣೆಗೆ ನಿಷೇಧ ಹೇರಲಾಗಿದೆ. ಹೀಗಾಗಿ ತಡರಾತ್ರಿಯವರೆಗೂ ನಡೆಯುವ ಪಾರ್ಟಿಗಳ ಮೇಲೆ ಈಗಿನಿಂದಲೇ ನಿಗಾ ಇಡಲಾಗಿದೆ.




Leave a Reply

Your email address will not be published. Required fields are marked *

error: Content is protected !!