ಜಾಲವಾದಿಯಲ್ಲಿ ಅಕ್ರಮ ಮದ್ಯ ವಶ

319

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕಿನ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಡಿಸೆಂಬರ್ 21, ಸೋಮವಾರ ಮಧ್ಯರಾತ್ರಿ ಅಕ್ರಮ ಮದ್ಯವನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಜಾಲವಾದಿ ಗ್ರಾಮದ ರಫೀಕ ಮೈಬೂಬಸಾಬ ಮೋಮಿನ ಅನ್ನೋ ಆರೋಪಿ ಬಳಿಯಿದ್ದ ಮದ್ಯವನ್ನ ವಶಕ್ಕೆ ಪಡೆಯಲಾಗಿದೆ.

ಗ್ರಾಮ ಪಂಚಾಯ್ತಿ ಚುನಾವಣೆ ನಿಮಿತ್ತ ತಾಲೂಕಿನಾದ್ಯಂತ ಅಬಕಾರಿ ಇಲಾಖೆಯಿಂದ ಭರ್ಜರಿ ಕಾರ್ಯಾಚರಣೆ ನಡೆಸಲಾಗ್ತಿದೆ. ಅದೆ ರೀತಿ ಕಳೆದ ರಾತ್ರಿ ದಾಳಿ ಮಾಡಿದಾಗ 8.640 ಲೀಟರ್ ಮದ್ಯ ಹಾಗೂ 1 ಬೈಕ್ ವಶಕ್ಕೆ ಪಡೆಯಲಾಗಿದೆ.

ನವೆಂಬರ್ 30ರಿಂದ ಡಿಸೆಂಬರ್ 21ರ ವರೆಗೂ ಸಿಂದಗಿ ತಾಲೂಕಿನ ವ್ಯಾಪ್ತಿಯಲ್ಲಿ 9 ಪ್ರಕರಣಗಳು ದಾಖಲಾಗಿವೆ. ಇನ್ನು ದೇವರಹಿಪ್ಪರಗಿ ತಾಲೂಕು ವ್ಯಾಪ್ತಿಯಲ್ಲಿ ಡಿಸೆಂಬರ್ 12ರಿಂದ 14ರ ವರೆಗೂ 3 ಪ್ರಕರಣಗಳು ದಾಖಲಾಗಿವೆ. ಅಬಕಾರಿ ಅಧಿಕಾರಿ ಆರತಿ ಖೈನೂರ ಅವರ ನೇತೃತ್ವದಲ್ಲಿ ಈ ದಾಳಿಗಳನ್ನ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!