ರಾಜ್ಯಗಳಿಗೆ ಶೇ.60ರಷ್ಟು ಹೆಚ್ಚುವರಿ ಹಣ: ಆರ್ ಬಿಐ ಗವರ್ನರ್

360

ನವದೆಹಲಿ: ಕರೋನಾದಿಂದಾಗಿ ದೇಶದಲ್ಲಿ ಆರ್ಥಿಕ ಸ್ಥಿತಿ ಕುಸಿದಿದ್ದು, ಇದಕ್ಕೆ ಸಂಬಂಧಸಿದಂತೆ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ ಸುದ್ದಿಗೋಷ್ಠಿ ನಡೆಸಿದ್ರು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಣದ ಹರಿವು ಕಾಪಾಡಿದ್ದೇವೆ ಎಂದು ತಿಳಿಸಿದ್ದಾರೆ.

ಬೇರೆ ದೇಶಗಳಿಗಿಂತ ನಾವು ಉತ್ತಮ ಸ್ಥಿತಿಯಲ್ಲಿದ್ದೇವೆ. ಯಾವುದೇ ಬ್ಯಾಂಕಿನಲ್ಲಿ ಹಣದ ಸಮಸ್ಯೆಯಿಲ್ಲ. ಕಳೆದ 4 ತಿಂಗಳಿಂದ ಉತ್ಪಾದನೆ ಕಡಿಮೆಯಾಗಿದೆ. ದೇಶದಲ್ಲಿ ಆರ್ಥಿಕ ಪ್ರಗತಿ ಶೇಕಡ 1.9 ಇದೆ. ಹೀಗಾಗಿ ಆರ್ ಬಿಐನ 150 ಸಿಬ್ಬಂದಿ ಹಗಲು ರಾತ್ರಿ ಕೆಲಸ ಮಾಡ್ತಿದ್ದಾರೆ. 2021-22ರಲ್ಲಿ ಜಿಡಿಪಿ 7.4 ವೃದ್ಧಿಯಾಗುವ ನಿರೀಕ್ಷೆಯಿದೆ. ದೇಶದ ಪರಿಸ್ಥಿತಿಯನ್ನ ಸೂಕ್ಷ್ಮವಾಗಿ ಗಮನಿಸಲಾಗ್ತಿದೆ ಎಂದಿದ್ದಾರೆ.

ಉದ್ಯೋಗ ವಲಯದ ಮೇಲೆ ಸಾಕಷ್ಟು ಹೊಡೆತ ಬಿದ್ದಿದೆ. ಇದ್ರಿಂದಾಗಿ ವಿಶ್ವದ ಆರ್ಥಿಕತೆ 9 ಟ್ರಿಲಿಯನ್ ಡಾಲರ್ ಗೆ ಕುಸಿದಿದೆ. ಈಗ ನಾವು ಸಣ್ಯ ಮತ್ತು ಮಧ್ಯಮ ಕೈಗಾರಿಕೆ ಉದ್ಯಮಿಗಳಿಗೆ 50 ಸಾವಿರ ಕೋಟಿ ಮೀಸಲು ಇಟ್ಟಿದ್ದೇವೆ. ನಬಾರ್ಡ್ ಗೆ 25 ಸಾವಿರ ಕೋಟಿ, ಎನ್ಎಚ್ ಬಿ 10 ಸಾವಿರ ಕೋಟಿ ಮೀಸಲು. ಎಸ್ಐಡಿಐಬಿಗೆ 15 ಸಾವಿರ ಕೋಟಿ ಮೀಸಲು ಇಟ್ಟಿದ್ದೇವೆ ಎಂದಿದ್ದಾರೆ.

ಇನ್ನು ದೇಶದ ಜಿಡಿಪಿಯ 3.2 ಹಣವನ್ನ ಬ್ಯಾಂಕ್ ಗಳಿಗೆ ನೀಡಿದ್ದೇವೆ. ಈ ಮೂಕ ಬ್ಯಾಂಕ್ ಗಳಿಗೆ ಹೆಚ್ಚುವರಿ ಹಣ ನೀಡಲಾಗ್ತಿದೆ. ಇಂಥಾ ಪರಿಸ್ಥಿತಿಯಲ್ಲೂ ಶೇಕಡ 91 ಎಟಿಎಂಗಳು ದೇಶದಲ್ಲಿ ಕೆಲಸ ನಿರ್ವಹಿಸ್ತಿವೆ ಅಂತಾ ತಿಳಿಸಿದ್ದಾರೆ. ರಿಸರ್ವ್ ರೆಪೋ ದರ ಪಾಯಿಂಟ್ಸ್ 25ರಷ್ಟು ಕುಸಿತ ಕಂಡಿದ್ದು, ಕರೋನಾ ವಿರುದ್ಧ ಹೋರಾಡಲು ರಾಜ್ಯಗಳಿಗೆ ಶೇಕಡ 60ರಷ್ಟು ಹೆಚ್ಚುವರಿ ದುಡ್ಡು ನೀಡಲಾಗ್ತಿದೆ. ಇದ್ರಿಂದಾಗಿ ಆರ್ ಬಿಐ ಬ್ಯಾಂಕ್ ಗಳಲ್ಲಿ ಕಡಿಮೆ ದರದಲ್ಲಿ ಸಾಲ ಸಿಗುತ್ತೆ ಎಂದಿದ್ದಾರೆ. ಹೀಗೆ ಹಲವು ವಿಶೇಷತೆಗಳನ್ನ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಘೋಷಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!