ತವರಿನಂಗಳದಲ್ಲಿ ಸೋತ ರಾಯಲ್ ಹುಡುಗರು

93

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಪಿಎಲ್ ಟೂರ್ನಿಯ 10ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ಶುಕ್ರವಾರ ಸಂಜೆ ನಡೆದ ಪಂದ್ಯದಲ್ಲಿ, ಕೆಕೆಆರ್ ಗೆದ್ದು ಬೀಗಿದೆ. ಇದರಿಂದಾಗಿ ರಾಯಲ್ ಹುಡುಗರು ತವರಿನಂಗಳದಲ್ಲಿ ಸೋಲು ಅನುಭವಿಸಿದ್ದಾರೆ.

ಟಾಸ್ ಗೆದ್ದ ಕೆಕೆಆರ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ವಿರಾಟ್ ಕೊಹ್ಲಿ ಅಜೇಯ 83, ಗ್ರೀನ್ 33, ಮ್ಯಾಕ್ಸ್ ವೆಲ್ 28 ರನ್ ಹೊರತುಪಡಿಸಿ ಯಾರೂ ಆಡಲಿಲ್ಲ. ನಾಯಕ ಡುಪ್ಲಸಿಸ್ ಕೇವಲ 8 ರನ್ ಗೆ ಔಟ್ ಆದರು. 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿ ಸವಾಲಿನ ಗುರಿ ನೀಡಿತು. ಕೆಕೆಆರ್ ಪರ ಹರ್ಷಿತ್ ರಾಣಾ, ರಸಲ್ ತಲಾ 2 ವಿಕೆಟ್ ಪಡೆದರು. ಸುನಿಲ್ ನರಾಯನ್ 1 ವಿಕೆಟ್ ಪಡೆದರು.

ಈ ಸ್ಕೋರ್ ಬೆನ್ನು ಹತ್ತಿದ ಕೆಕೆಆರ್ ಪಡೆ ಆರಂಭದಲ್ಲಿ ಅಬ್ಬರಿಸಿತು. ಸುನಿಲ್ ನರಾಯನ್, ಸಾಲ್ಟ್ ಜೋಡಿ ಮೊದಲ ಪವರ್ ಪ್ಲೇನ 6 ಓವರ್ ಗಳಲ್ಲಿ ಬರೋಬ್ಬರಿ 85 ರನ್ ಗಳಿಸಿತು. ನರಾಯನ್ 5 ಸಿಕ್ಸ್, 2 ಫೋರ್ ಗಳೊಂದಿಗೆ 22 ಬೌಲ್ ಗಳಲ್ಲಿ 47 ರನ್ ಗಳಿಸಿದರು. ಸಾಲ್ಟ್ 2 ಸಿಕ್ಸ್, 2 ಫೋರ್ ಗಳೊಂದಿಗೆ 20 ಬೌಲ್ ಗಳಲ್ಲಿ 30 ರನ್ ಗಳಿಸಿದರು.

ಈ ಜೋಡಿಯನ್ನು 7 ಓವರ್ ನ 3ನೇ ಬೌಲ್ ನಲ್ಲಿ ಮಯಾಂಕ್ ಡಗರ್ ಬ್ರೇಕ್ ಮಾಡಿದರು. ಸುನಿಲ್ ನರಾಯನ್ ಬೋಲ್ಡ್ ಆದರು. ಮುಂದೆ 92 ರನ್ ಗಳಿದ್ದಾಗ ವೈಶಾಕ್ ವಿಜಯ್ ಕುಮಾರ್ ಸಾಲ್ಟ್ ಔಟ್ ಮಾಡಿದರು. ಆದರೆ, ಮುಂದೆ ಬಂದ ವೆಂಕಟೇಶ್ ಅಯ್ಯರ್, ನಾಯಕ ಶ್ರೇಯಸ್ ಅಯ್ಯರ್ ಬ್ಯಾಟ್ ಬೀಸಿದರು. ವೆಂಕಟೇಶ್ 4 ಸಿಕ್ಸ್, 3 ಫೋರ್ ಗಳೊಂದಿಗೆ 30 ಬೌಲ್ ಗಳಲ್ಲಿ ಅರ್ಧಶತಕ ಗಳಿಸಿದರು. ನಾಯಕ ಶ್ರೇಯಸ್ 2 ಸಿಕ್ಸ್, 2 ಫೋರ್ ಗಳೊಂದಿಗೆ 39 ರನ್ ಗಳಿಸಿ ಅಜೇಯರಾಗಿ ಉಳಿದರು. ರಿಂಕು ಸಿಂಗ್ ಅಜೇಯ್ 5 ರನ್ ಗಳಿಸಿದರು. ಹೀಗಾಘಿ 16.5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿ ಗೆಲುವು ಸಾಧಿಸಿದರು. ಸುನಿಲ್ ನರಾಯನ್ ಪ್ಲೇಯರ್ ಆಫ್ ದಿ ಮ್ಯಾಚ್ ಆದರು.




Leave a Reply

Your email address will not be published. Required fields are marked *

error: Content is protected !!