ಜಡ್ಡು ಆರ್ಭಟ.. ಸಿಎಸ್ಕೆ ಎದುರು ಮುಗ್ಗರಿಸಿದ ಆರ್ ಸಿಬಿ

293

ಪ್ರಜಾಸ್ತ್ರ ಕ್ರೀಡಾಸುದ್ದಿ

ಮುಂಬೈ: ಇಲ್ಲಿನ ವಾಖಂಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ರನ್ ಗಳ 83 ಅಂತರದಿಂದ ಗೆಲುವು ದಾಖಲಿಸಿದೆ. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಂದಿದೆ. ಆರ್ ಸಿಬಿ ದ್ವಿತೀಯ ಸ್ಥಾನಕ್ಕೆ ಇಳಿದಿದೆ.

ಧೋನಿ ಟೀಂ ನೀಡಿದ 192 ರನ್ ಟಾರ್ಗೆಟ್ ಚೇಸ್ ಮಾಡುವಲ್ಲಿ ಕೊಹ್ಲಿ ಪಡೆ ಯಡವಿತು. ಆರಂಭದಲ್ಲಿ ಕೊಹ್ಲಿ ಹಾಗೂ ಪಡಿಕಲ್ ಅಬ್ಬರಿಸ್ತಿದ್ದರು. ಅದಕ್ಕೆ ಬ್ರೇಕ್ ಹಾಕಿದ್ದು ಸ್ಯಾಮ್ ಕರನ್. ಕೊಹ್ಲಿ(8) ವಿಕೆಟ್ ಪಡೆಯುವ ಮೂಲಕ 3.1 ಓವರ್ ಗೆ 44 ರನ್ ಗಳಿಸಿದ್ದ ಆರ್ ಸಿಬಿಗೆ ಶಾಕ್ ನೀಡಿದರು. ಮುಂದೆ 54ಕ್ಕೆ ಪಡಿಕಲ್(34) ವಿಕೆಟ್ ಬಿತ್ತು.

ವಾಷಿಂಗ್ಟನ್ ಸುಂದರ 7, ಮ್ಯಾಕ್ಸ್ ವೆಲ್ 22, ಎಬಿಡಿ 4, ಡ್ಯಾನ್ ಕ್ರಿಸ್ಟನ್ 1, ಜೇಮ್ಸನ್ 16, ಹರ್ಷಲ್ ಪಟೇಲ್ 0, ಸೈನಿ 2, ಸಿರಾಜ್ 1 ರನ್ ಗಳಿಸಿ ಔಟ್ ಆದರು. ಚಾಹಲ್ 6 ರನ್ ಗಳಿಸಿ ನಾಟೌಟ್ ಆಗಿ ಉಳಿದ. ಸಿಎಸ್ಕೆ ಮಾರಿಕ ಬೌಲಿಂಗ್ ನಿಂದಾಗಿ 18 ಓವರ್ ಗಳಿಗೆ 109 ರನ್ ಗಳಿಗೆ ಆಲೌಟ್ ಆಯ್ತು. ಜಡೇಜಾ 3, ಇಮ್ರಾನ್ ತಾಹಿರ್ 2, ಸ್ಯಾಮ್ ಕರನ್ ಹಾಗೂ ಠಾಕೂರ್ ತಲಾ 1 ವಿಕೆಟ್ ಪಡೆದರು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಸಿಎಸ್ಕೆ ಗಾಯಕ್ವಾಡ 33, ಡುಪ್ಲಿಸಿ 50, ರೈನಾ 24, ರಾಯಡು 14, ಜಡೇಜಾ ಭರ್ಜರಿ 62 ಹಾಗೂ ಧೋನಿ 2 ರನ್ ಗಳಿಸಿದರು. ಅಂತಿಮವಾಗಿ 4 ವಿಕೆಟ್ ನಷ್ಟಕ್ಕೆ 191 ರನ್ ಗಳನ್ನ ಗಳಿಸಿತು. ಹರ್ಷಲ್ ಪಟೇಲ್ 3 ಹಾಗೂ ಚಾಹಲ್ 1 ವಿಕೆಟ್ ಪಡೆದರು.




Leave a Reply

Your email address will not be published. Required fields are marked *

error: Content is protected !!