ರೇಷ್ಮಾ ಪಡೇಕನೂರು ಹತ್ಯೆ ಕೇಸ್: ಲಂಚ ಪಡೆಯುವಾಗ ಸಿಕ್ಕಿಬಿದ್ದ ಪೊಲೀಸರು

501

ವಿಜಯಪುರ: ಇಡೀ ಗುಮ್ಮಟನಗರಿಯಲ್ಲಿ ಸಂಚಲನ ಮೂಡಿಸಿದ್ದ ಕಾಂಗ್ರೆಸ್ ನ ರೇಷ್ಮಾ ಪಡೇಕನೂರ ಹತ್ಯೆ ಪ್ರಕರಣದ ಆರೋಪಿಗಳಿಂದ ಲಂಚ ಪಡೆಯುವಾಗ ಪೊಲೀಸ್ರು ಎಸಿಬಿ ಬಲೆಗೆ ಬಿದ್ದಿದ್ದಾರೆ.

ಹತ್ಯೆಯಾದ ರೇಷ್ಮಾ ಪಡೇಕನೂರ

ತನಿಖೆಗಾಗಿ ಸೋಲಾಪುರಕ್ಕೆ ಹೋಗಿದ್ದ ಬಸವನಬಾಗೇವಾಡಿ ಡಿವೈಎಸ್ಪಿ ಮಹೇಶ್ವರಗೌಡ ಪೊಲೀಸರು ಮಹಾರಾಷ್ಟ್ರದ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಪೊಲೀಸರು ಐದು ಲಕ್ಷ ರೂಪಾಯಿಗೆ ಡಿಮ್ಯಾಂಡ್ ಇಟ್ಟಿದ್ದರಂತೆ. ಅಂತಿಮವಾಗಿ ಅದು ಒಂದೂವರೆ ಲಕ್ಷಕ್ಕೆ ಬಂದಿದೆ. ಅದನ್ನ ಪಡೆಯುವಾಗ ಪೇದೆ ಮಲ್ಲಿಕಾರ್ಜುನ ಪೂಜಾರಿ ಹಾಗೂ ಮಧ್ಯವರ್ತಿ ರಿಯಾಜ ಕೊಕಟನೂರ ಮಹಾರಾಷ್ಟ್ರದ ಎಸಿಬಿ ಬಲಗೆ ಬಿದ್ದಿದ್ದಾರೆ.

ಮಹಾರಾಷ್ಟ್ರದ ಎಸಿಬಿ ಪೊಲೀಸರು

ಇನ್ನು ಪ್ರಕರಣದ ಪ್ರಮುಖ ಆರೋಪ ಬಸವನಬಾಗೇವಾಡಿಯ ಉಪವಿಭಾಗದ ಡಿವೈಎಸ್ಪಿ ಮಹೇಶ್ವರಗೌಡ ಬಂಧನಕ್ಕಾಗಿ ಶೋಧ ಕಾರ್ಯ ನಡೆದಿದ್ದು ಎಸಿಬಿ ಅಧಿಕಾರಿಗಳು ವಿಜಯಪುರಕ್ಕೆ ಆಗಮಿಸಿದ್ದಾರೆ. ಇನ್ನು ಪೇದೆ ಮಲ್ಲಿಕಾರ್ಜುನ ಪೂಜಾರಿಯನ್ನ ಅಮಾನತು ಮಾಡಲಾಗಿದೆ ಎಂದು ಎಸ್ಪಿ ಪ್ರಕಾಶ ನಿಕ್ಕಂ ತಿಳಿಸಿದ್ದಾರೆ.

ಡಿವೈಎಸ್ಪಿ ಮಹೇಶ್ವರಗೌಡ ಬಗ್ಗೆ ಮಹಾರಾಷ್ಟ್ರದ ಎಸಿಬಿ ಪೊಲೀಸರು ವರದಿ ನೀಡಿದ ನಂತರ, ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ವರದಿ ಸಲ್ಲಿಸುವುದಾಗಿ ಎಸ್ಪಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!