ತೆಲುಗು ಚಿತ್ರದ ವಿರುದ್ಧ ‘ರಾಬರ್ಟ್’ ಫ್ಯಾನ್ಸ್ ಗರಂ

572

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯದ ರಾಬರ್ಟ್ ಮೂವಿ ರಿಲೀಸ್ ಗೂ ಮೊದ್ಲೇ ಭರ್ಜರಿ ಸೌಂಡ್ ಮಾಡ್ತಿದೆ. ಟೀಸರ್, ಲಿರಿಕಲ್ ಸಾಂಗ್ಸ್ ನೋಡಿದ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಇದರ ನಡುವೆ ತೆಲುಗು ಚಿತ್ರವೊಂದರ ವಿರುದ್ಧ ಡಿ ಬಾಸ್ ಫ್ಯಾನ್ಸ್ ಗರಂ ಆಗಿದ್ದಾರೆ.

ಯೆಸ್, ಸಾಕಷ್ಟು ಹವಾ ಕ್ರಿಯೇಟ್ ಮಾಡಿರುವ ರಾಬರ್ಟ್ ಚಿತ್ರದ ಬಿಜಿಎಂ ಕದಿಯಲಾಗಿದೆಯಂತೆ. ತೆಲುಗಿನ ‘ರಾವಣ ಲಂಕಾ’ ಚಿತ್ರದಲ್ಲಿ ರಾಬರ್ಟ್ ಚಿತ್ರದ ಮ್ಯೂಸಿಕ್ ಕಾಪಿ ಮಾಡಲಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ. ರಾಬರ್ಟ್ ಚಿತ್ರದ ಮೋಷನ್ ಪೋಸ್ಟರ್ ಒಂದೇ ಬರೋಬ್ಬರಿ 16 ಲಕ್ಷ ಜನ ನೋಡಿದ್ದಾರೆ. ಇನ್ನು ಟೀಸರ್, ಸಾಂಗ್ಸ್ ಸಹ ರಿಲೀಸ್ ಆದ ಎರಡ್ಮೂರು ಗಂಟೆಯಲ್ಲಿ ಲಕ್ಷ ಲಕ್ಷ ವೀಕ್ಷಣೆ ಪಡೆದು ಧೂಳೆಬ್ಬಿಸಿವೆ.

ಹೀಗಿರುವಾಗ ಮೂರು ವಾರಗಳ ಹಿಂದೆ ರಿಲೀಸ್ ಆಗಿರುವ ರಾವಣ ಲಂಕಾ ಅನ್ನೋ ಚಿತ್ರದ ಟೀಸರ್ 5,800 ಜನ ವೀಕ್ಷಣೆ ಪಡೆದುಕೊಂಡಿದ್ದು, ಇದರಲ್ಲಿ ರಾಬರ್ಟ್ ಚಿತ್ರದ ಬಿಜಿಎಂ ನಕಲ ಮಾಡಲಾಗಿದೆ ಎನ್ನಲಾಗ್ತಿದ್ದು, ದರ್ಶನ ಫ್ಯಾನ್ ಚಿತ್ರದ ಟೀಂ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹಿಗ್ಗಾಮುಗ್ಗಾ ಬೈಯುತ್ತಿದ್ದಾರೆ. ಈ ಮೂಲಕ ರಾವಣ ಲಂಕಾ ಅನ್ನೋ ಚಿತ್ರ ವಿವಾದ ಮಾಡಿಕೊಂಡಿದೆ.




Leave a Reply

Your email address will not be published. Required fields are marked *

error: Content is protected !!