9 ವರ್ಷದ ನಂತರ ನಡೆಯಲಿರುವ ಜಾತ್ರೆ

408

ಪ್ರಜಾಸ್ತ್ರ ಸುದ್ದಿ

ಮುಧೋಳ: ತಾಲೂಕಿನ ಸುಕ್ಷೇತ್ರ ರೂಗಿ ಗ್ರಾಮದ ಆರಾಧ್ಯ ದೇವತೆ ಇಷ್ಟಾರ್ಥಗಳನ್ನು ಪೂರೈಸುವ ಶಕ್ತಿ ದೇವತೆ ಶ್ರೀ ಗ್ರಾಮದೇವಿಯ ಜಾತ್ರಾ ಮಹೋತ್ಸವ ಹಾಗೂ ಮೇ 3 ಮಂಗಳವಾರ ನಡೆಯುವ ದೇವಿಯ ಪಲ್ಲಕ್ಕಿ ಉತ್ಸವ ಸಮಾರಂಭ, 9 ವರ್ಷಗಳ ನಂತರ ನಡೆಯುತ್ತಿದೆ.

ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ದೇವಿಯ ಭವ್ಯ ಮೆರವಣಿಗೆ, ನಂದಿಕೋಲು ತರುವುದು, ವಾದ್ಯಗಳೊಂದಿಗೆ ಗ್ರಾಮದೇವತೆಯ ಜಾತ್ರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಅದೇ ದಿನ ಸಂಜೆ 4 ಗಂಟೆಗೆ ಪಲ್ಲಕ್ಕಿ ಉತ್ಸವ, ಮಹಾರಥೋತ್ಸವ, ಅಡವಿಸಿದ್ದೇಶ್ವರ ಮಹಾ ರಥೋತ್ಸವ ಕಾರ್ಯಕ್ರಮಗಳೊಂದಿಗೆ ಜಾತ್ರೆ ನಡೆಯುವುದು ಭಕ್ತ ಮಂಡಳಿ ತಿಳಿಸಿದೆ.

ಶ್ರೀ ಶ್ರೋ ಬ್ರ ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳು, ಸಾಧು ಸಂಸ್ಥಾನ ಮಠ, ಇಂಚಲ ದಿವ್ಯಸಾನಿಧ್ಯ , ಶ್ರೀ ಶ್ರೋ ಬ್ರ ನಿತ್ಯಾನಂದ ಮಹಾಸ್ವಾಮೀಜಿಗಳು, ಅಡವಿ ಆಶ್ರಮ, ರೂಗಿ ಘನ ಅಧ್ಯಕ್ಷತೆಯಲ್ಲಿ ಜಾತ್ರೆಯ ಎಲ್ಲಾ ಕಾರ್ಯಕ್ರಮಗಳು ಜರುಗಲಿವೆ. ಶ್ರೀ ಶ್ರೋ ಬ್ರ ಶಿವಾನಂದ ಮಹಾಸ್ವಾಮಿಜಿಗಳು, ಶ್ರೀ ಸಿದ್ದರಾಮಯ್ಯ ಹೊಳೆಮಠ ಮಹಾಸ್ವಾಮಿಗಳು, ಮೂಲ ಸಂಸ್ಥಾನ ಮಠದ ಬಬಲಾದಿ, ಶ್ರೀ ಶಿವಪುತ್ರ ಅವಧೂತ ಮಹಾಸ್ವಾಮಿಜಿಗಳು, ಶ್ರೀ ಅದ್ವೈತಾನಂದ ಮಹಾಸ್ವಾಮಿಗಳ ಸಮ್ಮುಖದಲ್ಲಿ ಒಂಬತ್ತು ವರ್ಷಗಳ ನಂತರ ಅದ್ಧೂರಿ ಜಾತ್ರೆ ಜರುಗಲಿದೆ.

 ಗ್ರಾಮದೇವತೆ ಮೂರ್ತಿ ಪ್ರತಿಷ್ಠಾಪನೆ, ಉಡಿತುಂಬುವ ಕಾರ್ಯಕ್ರಮ, ಚೌಡಕಿ ಪದಗಳು, ಡೊಳ್ಳಿನ ಪದಗಳು ನಡೆಯಲಿವೆ. ಮರುದಿನ ಮಾರುತೇಶ್ವರ ಓಕಳಿ ಕಾರ್ಯಕ್ರಮ ಹಾಗೂ ಹಾಸ್ಯ ಕಲಾವಿದರಿಂದ ನಗೆಹಬ್ಬ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಭಾನುವಾರ ಮಹಿಳಾ ಗಾಯಕಿಯರಿಂದ ಡೊಳ್ಳಿನ ಪದಗಳು ಹಾಗೂ ಅಡವಿಸಿದ್ದೇಶ್ವರ ನಾಟ್ಯಸಂಘ ಗುರುಜಿಯವರಿಂದ ನ್ಯಾಯಕ್ಕಾಗಿ ಸಿಡಿದೆದ್ದ ನಾಟಕ ಪ್ರದರ್ಶನ ಇರುವುದು ಎಂದು ತಿಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!