ಪಕ್ಷಿ, ಮರಗಳ ಜೀವ ರಕ್ಷಕ ಯಲ್ಲಪ್ಪ

411

ಪ್ರಜಾಸ್ತ್ರ ವಿಶೇಷ

ಮುಧೋಳ: ಇವತ್ತಿನ ಆಧುನಿಕ ಜೀವನ ಶೈಲಿಯಲ್ಲಿ ಪ್ರಕೃತಿ ಉಳಿಸಿಕೊಳ್ಳುವುದೇ ದೊಡ್ಡ ಸಾಹಸವಾಗಿದೆ. ಇಲ್ಲದೆ ಹೋದರೆ ಮುಂದೊಂದು ದಿನ ಮನುಷ್ಯ ಕುಲವೇ ನಾಶವಾಗಲಿದೆ. ಇದನ್ನು ಅರಿತ ಕೆಲವರು ಪ್ರಾಣಿ, ಪಕ್ಷಗಳು, ಮರ ಗಿಡಗಳನ್ನು ಉಳಿಸಿ ಬೆಳಸುವ ಕೆಲಸ ಮಾಡುತ್ತಾರೆ. ಅಂತವರ ಸಾಲಿನಲ್ಲಿ ಯಲ್ಲಪ್ಪ ಶಿಂದೆ ಇದ್ದಾರೆ.

ಅಭಿವೃದ್ಧಿ ಹೆಸರಿನಲ್ಲಿ ಮರಗಿಡಗಳನ್ನು ಕತ್ತಿರಸಲಾಗುತ್ತಿದೆ. ಇದರಿಂದಾಗಿ ಪಕ್ಷಿ ಸಂಕುಲ ಸಹ ನಾಶವಾಗುತ್ತಿದೆ. ಪರಿಸರ ಉಳಿಸಿ, ಅರಣ್ಯ ರಕ್ಷಿಸಿ ಅನ್ನೋದು ಬರೀ ಸ್ಲೋಗನ್ ಆಗಿ ಉಳಿದಿದೆ. ಆದರೆ, ರನ್ನ ನಾಡಿನ ಮುಧೋಳ ತಾಲೂಕಿನ ಉತ್ತೂರಿನ ಯಲ್ಲಪ್ಪ ಶಿಂದೆ ತಮ್ಮ ನಿತ್ಯ ಜೀವನದಲ್ಲಿ ಇದನ್ನು ಅಳವಡಿಸಿಕೊಂಡು ಪಕ್ಷಿಗಳ, ಮರಗಳ ಜೀವ ರಕ್ಷಕರಾಗಿದ್ದಾರೆ.

ಯಲ್ಲಪ್ಪ ಶಿಂದೆ ಅನಕ್ಷರಸ್ಥರು. ಪರಿಸರ, ಪಕ್ಷಿಗಳ ಮೇಲೆ ಅಪಾರ ಪ್ರೇಮವನ್ನು ಇಟ್ಟುಕೊಂಡ ವ್ಯಕ್ತಿ . ದಿನನಿತ್ಯದ ಕಾಯಕದಲ್ಲಿ ತಾವು ಒಂದು ಕೆಲಸ ಬಿಡಬಹುದು ಆದರೆ ಈ ಪಕ್ಷಿಗಳಿಗೆ ಆಹಾರ ನೀಡುವ ಕಾಯಕ ಸಾಗುತ್ತಲೇ ಇರುತ್ತದೆ. ಈ ಕಾಯಕ್ಕೆ ಸುಮಾರು 15 ವರ್ಷಗಳ ನಂಟಿದೆ. ಇಂತಹ ಪರಿಸರ, ಪಕ್ಷಿ ಪ್ರೇಮಿಯನ್ನು ಸರ್ಕಾರ ಗುರುತಿಸಿ ಪ್ರೋತ್ಸಾಹಿಸಬೇಕು ಅನ್ನೋದು ಎಲ್ಲರ ಆಶಯ.




Leave a Reply

Your email address will not be published. Required fields are marked *

error: Content is protected !!