‘ಸಾಹೋ’ಗೆ ಸಿಕ್ತು ಮಿಶ್ರ ಪ್ರತಿಕ್ರಿಯೆ

371

ಸಾಕಷ್ಟು ನಿರೀಕ್ಷೆಗಳನ್ನ ಹುಟ್ಟು ಹಾಕಿದ್ದ ಪ್ರಭಾಸ ನಟನೆಯ ಬಿಗ್ ಬಜೆಟ್ ಸಿನ್ಮಾ ಸಾಹೋ ಇಂದು ವರ್ಲ್ಡ್ ವೈಡ್ ರಿಲೀಸ್ ಆಗಿದೆ. ತೆಲುಗು, ತಮಿಳು, ಹಿಂದಿ ಹಾಗೂ ಮಾಲಿಯಾಳಂನಲ್ಲಿ ಚಿತ್ರ ಬಿಡುಗಡೆಯಾಗಿದೆ. ಇಷ್ಟು ದಿನಗಳಿಂದ ಕಾಯುತ್ತಿದ್ದ ಪ್ರಭಾಸ ಅಭಿಮಾನಿಗಳ ದಿಲ್ ಖುಷ್ ಆಗಿದೆ.

ಮೊದಲ ದಿನ ಸಿನ್ಮಾ ನೋಡಿದ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ಮೊದಲರ್ಧ ಚೆನ್ನಾಗಿದೆ ಅಂತಾ ಹೇಳಿದ್ದಾರೆ. ಕೆಲವರು ಸೆಕೆಂಡ್ ಹಾಫ್ ಕುತೂಹಲ ಮೂಡಿಸುತ್ತೆ ಅಂತಾ ಹೇಳಿದ್ದಾರೆ. ಇನ್ನು ಕೆಲವರು ಪ್ರಭಾಸ ಅಭಿಮಾನಿಗಳಿಗೆ ಇದು ಸಿನ್ಮಾ ಅಲ್ಲ. ಎಲ್ಲ ವ್ಯರ್ಥ ಎಂದಿದ್ದಾರೆ.

ಟ್ರೇಲರ್ ಮೂಲಕ ಭರ್ಜರಿ ಹವಾ ಕ್ರಿಯೇಟ್ ಮಾಡಿದ ಸಾಹೋ ಸಿನ್ಮಾದ ಬಗೆಗಿನ ನಿರೀಕ್ಷೆಗಳು ಸಂಪೂರ್ಣ ಸುಳ್ಳಾಗದಿದ್ರೂ ಬಾಹುಬಲಿ ಸಿನ್ಮಾದ ದಾಖಲೆ ಮುರಿಯೋದು ಡೌಟ್ ಅನ್ನೋ ಮಾತುಗಳು ಕೇಳಿ ಬರ್ತಿವೆ.




Leave a Reply

Your email address will not be published. Required fields are marked *

error: Content is protected !!