ಚಂದನವನ ಡ್ರಗ್ಸ್ ಕೇಸ್: ಖನ್ನಾಗೆ ಜಾಮೀನು

278

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಅಂಗಳದಲ್ಲಿ ಭಾರೀ ಸದ್ದು ಮಾಡಿದ ಡ್ರಗ್ಸ್ ಪ್ರಕರಣ ಸಂಬಂಧ ಆರೋಪಿ ವಿರೇನ್ ಖನ್ನಾಗೆ ಜಾಮೀನು ನೀಡಲಾಗಿದೆ. ಪರಪ್ಪನ ಅಗ್ರಹಾರದಲ್ಲಿದ್ದ ಖನ್ನಾಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ.

ಕನ್ನಡ ಚಿತ್ರರಂಗದಲ್ಲಿ ಮಾದಕ ವಸ್ತುವಿನ ಜಾಲ ಸಂಬಂಧ ಖನ್ನಾ ಪೊಲೀಸರ ಬಲೆಗೆ ಬಿದ್ದಿದ್ದ. ಬೆಂಗಳೂರು ಸೇರಿ ಹಲವು ಕಡೆ ಭರ್ಜರಿ ಪಾರ್ಟಿ ಮಾಡ್ತಿದ್ದ ಖನ್ನಾ, ಡ್ರಗ್ಸ್ ದಂಧೆಯೂ ನಡೆಸ್ತಿದ್ದನಂತೆ. ಈ ಸಂಬಂಧ ಈತನನ್ನ ದೆಹಲಿಯಲ್ಲಿ ಬಂಧಿಸಲಾಗಿತ್ತು. ಇದೀಗ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.




Leave a Reply

Your email address will not be published. Required fields are marked *

error: Content is protected !!