ಶಾಲಾ-ಕಾಲೇಜು ಬಂದ್ ಮುಂದುವರಿಕೆ

401

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕೋವಿಡ್ 19 ಸೋಂಕಿನಿಂದಾಗಿ ಶೈಕ್ಷಣಿಕ ಚಟುವಟಿಕೆ ನಡೆಸಲು ಸಾಧ್ಯವಾಗ್ತಿಲ್ಲ. ಇದ್ರಿಂದಾಗಿ ಶಾಲಾ, ಕಾಲೇಜುಗಳು ಯಾವಾಗ ಶುರುವಾಗುತ್ತವೆ ಅನ್ನೋ ಪ್ರಶ್ನೆ ಜನರಲ್ಲಿ ಕಾಡ್ತಿದೆ. ಆದ್ರೆ, ಸಧ್ಯಕ್ಕೆ ಆ ಕಾಲ ಕೂಡಿಬರುವ ಲಕ್ಷಣಗಳಿಲ್ಲ.

ಸಧ್ಯದ ಮಾಹಿತಿ ಪ್ರಕಾರ ಅಕ್ಟೋಬರ್ 15ರ ವರೆಗೆ ಶಾಲಾ-ಕಾಲೇಜುಗಳು ಬಂದ್ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಹಿಂದೆ ಕಂಟೋನ್ಮೆಂಟ್ ಝೋನ್ ಹೊರತು ಪಡಿಸಿ ಉಳಿದ ಕಡೆ ಸೆಪ್ಟೆಂಬರ್ 21 ರಿಂದ 9ನೇ ತರಗತಿಯಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳು, ತಮ್ಮ ಓದಿನ ಸಂದೇಹಕ್ಕೆ ಸಂಬಂಧಿಸಿದಂತೆ ಶಾಲೆಗಳು ಬರಲು ಒಪ್ಪಿಗೆ ನೀಡಲಾಯ್ತು.

ಆದ್ರೆ, ಈಗಿನ ಪರಿಸ್ಥಿತಿಯಲ್ಲಿ ಶಾಲಾ, ಕಾಲೇಜುಗಳು ಶುರು ಮಾಡುವುದು ಒಳ್ಳೆಯದಲ್ಲ ಅನ್ನೋ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಅಕ್ಟೋಬರ್ 15ರ ತನಕ ಶಿಕ್ಷಣ ಸಂಸ್ಥೆಗಳು ಬಂದ್ ಮಾಡಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!