ಸಂಶೋಧನೆಯನ್ನು ಹೊಸ ದೃಷ್ಟಿಕೋನದಿಂದ ನೋಡಬೇಕು: ಪ್ರೊ.ಸಿ.ಕೆ.ನಾವಲಗಿ

646

ಪ್ರಜಾಸ್ತ್ರ ಸುದ್ದಿ

ಧಾರವಾಡ: ಸಂಶೋಧನೆಯನ್ನು ಹೊಸ ದೃಷ್ಟಿಕೋನದಿಂದ ನೋಡಿದಾಗ ಮಾತ್ರ ಉತ್ತಮ ಪರಿಣಾಮ ನೀರಿಕ್ಷಿಸಲು ಸಾಧ್ಯ ಎಂದು ಜಾನಪದ ವಿದ್ವಾಂಸರಾದ ಪ್ರೊ.ಸಿ.ಕೆ.ನಾವಲಗಿ ಅಭಿಪ್ರಾಯಪಟ್ಟರು.

ಕರ್ನಾಟಕ ವಿಶ್ವವಿದ್ಯಾಲಯ ಡಾ.ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ನೂತನ ಸಭಾಂಗಣದಲ್ಲಿ ಆಯೋಜಿಸಿದ ಪ್ರೊ.ಶಿ.ಶಿ.ಬಸವನಾಳ ಸ್ಮಾರಕ ಮೂಲತತ್ವ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಸಂಶೋಧನೆಯ ಸಾಧ್ಯತೆಗಳು-ಹೊಸ ದೃಷ್ಟಿಕೋನ’ ಎಂಬ ಬಿಷಯದ ಕುರಿತು ಮಾತನಾಡಿದರು. ಸಂಶೋಧಕನಲ್ಲಿ ಹೊಸ ಅನ್ವೇಷಣೆಯ ಗುಣದ ಜೊತೆಗೆ ಸಂಶೋಧನೆ ಕೈಗೊಂಡಾಗ ಸಂಶೋಧಕನಿಗೆ ತಾಳ್ಮೆ ಬಹಳ ಅಗತ್ಯ. ಸಂಶೋಧಕನಿಗೆ ಸೃಜನಶೀಲತೆ, ತರ‍್ಕಿಕತೆ, ಸಂಯೋಜನೆ ಶಕ್ತಿಯನ್ನು ಹೊಂದಿರುವದರ ಜೊತೆಗೆ ಭಿನ್ನ ದೃಷ್ಟಿಕೋನದಿಂದ ನೋಡುವ ಪ್ರವೃತ್ತಿಯನ್ನು ಹೊಂದಿರಬೇಕು ಮತ್ತು ಸಂಶೋಧಕನಾದವನು ಹೊಸ ಓದಿನ ಮೂಲಕ ಅಧ್ಯಯನ ನಿರಂತರವಾಗಿ ಇರಬೇಕು ಎಂದರು. ಜಾನಪದ ಇಂದು ಆಧುನಿಕ ತಂತ್ರಜ್ಞಾನದ ಸ್ಪರ್ಶದಿಂದ ಹೊಸತನವನ್ನು ಹೊಂದುತ್ತಲಿದೆ ಎಂದರು.

ಬಸವನಾಳರು ಸತ್ಯ ಶೋಧಕ ಸಂಶೋಧಕರಾಗಿದ್ದ ಅವರು ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ಬಹಳ ಇದೆ ಎಂದರು. ಸಾಹಿತ್ಯ ವಲಯದಲ್ಲಿ ಅನೇಕ ಗ್ರಂಥಗಳನ್ನು ಸಂಪಾದನೆ ಮತ್ತು ಸಂಶೋಧನೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ಮಾತನಾಡಿ, ಸಂಶೋಧನೆ ಒಂದು ವಿಸ್ತಾರವಾದ ಕ್ಷೇತ್ರವಾಗಿದ್ದು, ಸಂಶೋಧಕನಿಗೆ ನಿರಂತರವಾದ ಜ್ಞಾನದ ಹಸಿವು ಮತ್ತು ವಿಭಿನ್ನವಾದ ಚಿಂತನೆ ಹೊಂದಿರಬೇಕು ಎಂದ ಅವರು ಸಂಶೋಧಕನಾದವನು ನಿರಂತರ ಅಧ್ಯಯನ, ಪರಿಶ್ರಮವನ್ನು ಮೈಗೂಡಿಸಿಕೊಳ್ಳಬೇಕು. ಪ್ರಸ್ತುತ ಸಂಶೋಧನೆಗಳು ಹೊಸ ಆಯಾಮ,ಪ್ರಸ್ತುತ ಸಮಸ್ಯೆಗಳನ್ನು ಆಧಾರಿಸಿ ನಮ್ಮ ಸಂಶೋಧನೆಗಳು ನಡೆಯಬೇಕು ಎಂದರು‌.

ಈ ವೇಳೆ ಮೌಲ್ಯಮಾಪನ ಕುಲಸಚಿವ ಡಾ.ಎಚ್.ನಾಗರಾಜ್, ಪ್ರಸಾರಾಂಗದ ನಿರ್ದೇಶಕ ಡಾ.ಚಂದ್ರಶೇಖರ ರೊಟ್ಟಿಗವಾಡ, ಡಾ.ನಿಜಲಿಂಗಪ್ಪ ಮಟ್ಟಿಹಾಳ, ಟಿ‌.ಎಂ.ಭಾಸ್ಕರ್, ಡಾ.ರಾಜೇಂದ್ರ ನಾಯಕ, ಡಾ.ಶಾಂತಿನಾಥ ದಿಬ್ಬದ, ಡಾ.ಯರವಿನತೇಲಿಮಠ, ಡಾ.ವಿ.ಎಲ್.ಪಾಟೀಲ್, ಡಾ.ಎನ್‌.ಸಿದ್ದಪ್ಪ, ಪ್ರೊ.ಶಿ.‌ಶಿ.ಬಸವನಾಳ ಅವರ ಪುತ್ರ ರವೀಂದ್ರ ಬಸವನಾಳ ಸೇರಿದಂತೆ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!