ಶಾಂತಗಂಗಾಧರ ಶ್ರೀಗಳ 75ನೇ ಜನುಮ ದಿನಕ್ಕೆ ಹಲವು ಸಂಕಲ್ಪ

249

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಪಟ್ಟಣದ ಗುರುದೇವ ಆಶ್ರಮದ ಶ್ರೀ ಶಾಂತಗಂಗಾಧರ ಜಗದ್ಗುರುಗಳ 74ನೇ ಜನುಮ ದಿನವನ್ನ ಅತ್ಯಂತ ಸರಳವಾಗಿ ಆಚರಿಸಲಾಯ್ತು. ಕೋವಿಡ್ ಮಾರ್ಗಸೂಚಿಯಂತೆ ಭಕ್ತರು, ಶಿಷ್ಯರು ಕೂಡಿಕೊಂಡು ಶ್ರೀಗಳ ಜನುಮ ದಿನವನ್ನ ಸೋಮವಾರ ಮಠದಲ್ಲಿ ಆಚರಿಸಲಾಯ್ತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತ್ನಾಡಿದ ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಶ್ರೀಗಳ ನಮ್ಮ ಒಡನಾಟ ಬಹಳ ವರ್ಷಗಳಿಂದ ಕೂಡಿದೆ. ಸ್ವಾಮೀಜಿಗಳು ಅಂದ್ರೆ ಹೀಗೇ ಇರಬೇಕು ಅನ್ನುವಷ್ಟರ ಮಟ್ಟಿಗೆ ಸರಳವಾಗಿ ಇರ್ತಾರೆ. ಯಾವುದೇ ಆಡಂಬರ, ಡಂಬಾಚಾರವಿಲ್ಲ. ಶ್ರೀಗಳ ಜ್ಞಾನವನ್ನ ಈ ಸಮಾಜ ಇನ್ನು ಹೆಚ್ಚಿನ ರೀತಿಯಲ್ಲಿ ಉಪಯೋಗ ಪಡೆದುಕೊಳ್ಳಬೇಕು ಎಂದರು.

ಇನ್ನೋರ್ವ ಮುಖ್ಯಅತಿಥಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ವೈ.ಸಿ ಮಯೂರ ಮಾತ್ನಾಡಿ, ಅಂದಿನ ಕಾಲದಲ್ಲಿಯೇ ಎಂ.ಎ ಮಾಡಿದ ಶ್ರೀಗಳು ಮನಸ್ಸು ಮಾಡಿದ್ದರೆ ಸರ್ಕಾರದ ಉನ್ನತ ಹುದ್ದೆ ಅಲಂಕರಿಸಬಹುದಿತ್ತು. ಅದನ್ನ ತೊರೆದು ಸಮಾಜ ಸೇವೆಗೆ ನಿಂತುಕೊಂಡರು. ಅತ್ಯಂತ ಸರಳ ನಡೆ ನುಡಿಯ ಶ್ರೀಗಳ ಪುಣ್ಯದ ಫಲದಿಂದ ನಾನು ಇವತ್ತು ಜೀವಂತವಾಗಿದ್ದೇನೆ ಎಂದು ಹೇಳುವ ಮೂಲಕ ಹಳೆಯ ಘಟನೆಯೊಂದನ್ನ ಮೆಲುಕು ಹಾಕಿದರು.

ಶ್ರೀಗಳು ಮಾತ್ನಾಡಿ, ನಾವು ಇಷ್ಟು ವರ್ಷ ಬದುಕಿರುವುದಕ್ಕೆ ದೇವರಿಗೆ ಧನ್ಯವಾದ ಹೇಳಬೇಕು. ದೇವರು ಯಾವಾಗ ಕರೆಯುತ್ತಾನೋ ಆಗ ಹೋಗಲು ಸದಾ ಸಿದ್ಧರಿದ್ದೇವೆ. ಇರುವ ತನಕ ಸಮಾಜದ ಸೇವೆಯನ್ನ ಸಲ್ಲಿಸುವ ಶಕ್ತಿಯನ್ನ ನೀಡಲಿ ಎಂದು ಕೇಳಿಕೊಳ್ಳುತ್ತೇನೆ ಅಂತಾ ಹೇಳಿದ್ರು. ಇನ್ನು ಶ್ರೀಗಳ 75ನೇ ಜನುಮ ದಿನದಂದು ಸಾಮೂಹಿಕ ವಿವಾಹ, ಅಭಿನಂದನಾ ಗ್ರಂಥ ಸೇರಿದಂತೆ ಹಲವು ಕಾರ್ಯಕ್ರಮಗಳನ್ನ ಮಾಡುತ್ತೇವೆ ಎಂದು ಮುಖಂಡರು, ಭಕ್ತರು ಇದೇ ವೇಳೆ ಸಂಕಲ್ಪ ಮಾಡಿದರು.

ಬಿ.ಕೊಂಡಗೂಳಿ, ಹಾಸೀಂಪೀರ ವಾಲೀಕಾರ, ಸಾಯಬಣ್ಣ ಬಾಗೇವಾಡಿ, ದೂಳಭಾ ಅವರು ಮಾತ್ನಾಡಿ ಶಾಂತಗಂಗಾಧರ ಶ್ರೀಗಳ ವ್ಯಕ್ತಿತ್ವ ಎಷ್ಟೊಂದು ಆದರ್ಶಪ್ರಾಯವಾಗಿದೆ ಅನ್ನೋ ಮಾತುಗಳನ್ನಾಡಿದರು. ಈ ವೇಳೆ ಶಾಮಲಾ ಮಂದೇವಾಲಿ, ಅಕ್ಷಯ ಅಲ್ಲಾಪೂರ, ಮಲ್ಲು ತಳವಾರ ಸೇರಿ ಹಲವರು ಭಾಗವಹಿಸಿದ್ದರು. ರಾಜು ನರಗೋಧಿ ನಿರೂಪಿಸಿ ವಂದಿಸಿದರು.




Leave a Reply

Your email address will not be published. Required fields are marked *

error: Content is protected !!