ಸಿಂದಗಿಯಲ್ಲಿ ಹೈಅಲರ್ಟ್.. ಎಲ್ಲೆಡೆ ತಡೆಗೋಡೆ ನಿರ್ಮಾಣ..

1403

ಸಿಂದಗಿ: ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಹೈಅಲರ್ಟ್ ಪರಿಸ್ಥಿತಿಯಿದೆ. ಕರೋನಾದಿಂದಾಗಿ ಸಾಕಷ್ಟು ಕಠಿಣ ಕ್ರಮಗಳನ್ನ ತೆಗೆದುಕೊಳ್ಳಲಾಗ್ತಿದ್ದು, ಎಲ್ಲಡೆ ತಡೆಗೋಡೆಗಳನ್ನ ನಿರ್ಮಾಣ ಮಾಡಲಾಗಿದೆ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಕಬ್ಬಿಣದ ಕಂಬಗಳನ್ನ ರಸ್ತೆಗೆ ಅಡ್ಡಲಾಗಿ ಕಟ್ಟುವ ಮೂಲಕ ಅನಗತ್ಯವಾಗಿ ಸಂಚಾರ ಮಾಡುವವರಿಗೆ ಬ್ರೇಕ್ ಹಾಕಲಾಗಿದೆ. ಪುರಸಭೆ ಹಾಗೂ ಪೊಲೀಸ್ ಸಿಬ್ಬಂದಿ ತಡೆಗೋಡೆ ನಿರ್ಮಿಸಿದ್ದಾರೆ.

ಅಂಬಿಗೇರ ಚೌಡಯ್ಯನ ಸರ್ಕಲ್

ಪಟ್ಟಣದ ಬಸವೇಶ್ವರ ಸರ್ಕಲ್, ಕಾಲೇಜ್ ರೋಡ್, ಅಂಬಿಗೇರ ಚೌಡಯ್ಯನ ಸರ್ಕಲ್, ಆಲಮೇಲ ರೋಡ್, ಬಂದಾಳ ರೋಡ್, ಚಿಕ್ಕಸಿಂದಗಿ ರೋಡ್, ಎಸ್ ಬಿಐನಿಂದ ಗಾಂಧಿ ಸರ್ಕಲ್ ಹೋಗುವ ರಸ್ತೆ, ಟಿಪ್ಪು ಸಲ್ತಾನ್ ವೃತ್ತ, ವಿವೇಕಾನಂದ ಸರ್ಕಲ್ ಸೇರಿದಂತೆ ಪ್ರಮುಖ ರಸ್ತೆಗಳನ್ನ ಸಂಪೂರ್ಣ ಬಂದ್ ಮಾಡಲಾಗಿದೆ. ಅಲ್ದೇ, ಬಜಾರ್ ಗೆ ಎಂಟ್ರಿಯಾಗುವ ಎಲ್ಲ ರಸ್ತೆಗಳನ್ನ ಬಂದ್ ಮಾಡಲಾಗಿದೆ. ಇದ್ರಿಂದಾಗಿ ಸಂಚಾರ ವ್ಯವಸ್ಥೆ ಒಂದು ರೀತಿಯಿಂದ ಕಂಟ್ರೋಲ್ ಗೆ ಬಂದಿದೆ.

ಎಸ್ ಬಿಐನಿಂದ ಗಾಂಧಿ ಚೌಕ್ ರಸ್ತೆ

ಇದರ ಜೊತೆಗೆ ಅನಗತ್ಯವಾಗಿ ಹೊರ ಬಂದವರಿಗೆ ಲಾಠಿ ಏಟಿನ ರುಚಿ ಸಿಕ್ಕಿದೆ. ಸುಖಾಸುಮ್ಮನೆ ಬೈಕ್ ತೆಗೆದುಕೊಂಡು ಪಟ್ಟಣದಲ್ಲಿ ಓಡಾಡುವ ಜನಗಳಿಗೆ ಪೊಲೀಸ್ರು ಭರ್ಜರಿಯಾಗಿ ಲಾಠಿ ಬೀಸಿದ್ದಾರೆ. ಹೀಗಾಗಿ ಓಡಾಡುವರ ಸಂಖ್ಯೆ ಕಡಿಮೆಯಾಗಿದೆ. ಇನ್ನು ನಾಳೆ ಭಾನುವಾರ ಸಂತೆ ಇರುತ್ತೆ ಎಂದುಕೊಂಡು ಬರಲು ಹೋಗ್ಬೇಡಿ. ರೈತರು ಸಹ ತರಕಾರಿ, ಹಣ್ಣುಗಳನ್ನ ತೆಗೆದುಕೊಂಡು ಬರಲು ಹೋಗ್ಬೇಡಿ. ಸಂತೆ ಅದು ಇದು ಏನೂ ಇರುವುದಿಲ್ಲ. ಹೀಗಾಗಿ ಸುಮ್ಮನೆ ಮನೆಯಲ್ಲಿ ಕುಳಿತುಕೊಂಡು ಆರೋಗ್ಯ ಕಾಪಾಡಿಕೊಳ್ಳಿ.

ಬಸವೇಶ್ವರ ಸರ್ಕಲ್ ಹತ್ತಿರ
ಟಿಪ್ಪು ಸುಲ್ತಾನ್ ಸರ್ಕಲ್
ಆಲಮೇಲ ರೋಡ್


TAG


Leave a Reply

Your email address will not be published. Required fields are marked *

error: Content is protected !!