ಸಿಂದಗಿ ಉಪ ಚುನಾವಣೆ: 297 ಮತಗಟ್ಟೆ.. 7 ಚೆಕ್ ಪೋಸ್ಟ್

322

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಧಾನಸಭೆ ಉಪ ಚುನಾವಣೆ ಸಂಬಂಧ ಗುರುವಾರ ಸಂಜೆ ಪಟ್ಟಣದ ತಹಶ್ಲೀದಾರ್ ಕಾರ್ಯಾಲಯದಲ್ಲಿ ಚುನಾವಣಾಧಿಕಾರಿಯಾದ ರಾಹುಲ್ ಶಿಂಧೆ ಮಾತನಾಡಿ, ಒಟ್ಟು 297 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 7 ಕಡೆ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ. ಅವುಗಳನ್ನು ಪರಿಶೀಲನೆ ನಡೆಸಲಾಯಿತು ಎಂದರು.

ಮೊರಟಗಿ, ವಿಭೂತಹಳ್ಳಿ, ತಾಂಬಾ, ಕನ್ನೊಳ್ಳಿ ಕ್ರಾಸ್, ಹಂದಿಗನೂರ, ದೇವಣಗಾಂವ ಹಾಗೂ ಗೋಲಗೇರಿ ಸೇರಿದಂತೆ 7 ಕಡೆ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. 22 ಸೆಕ್ಟರ್ ಅಧಿಕಾರಿಗಳು, 18 ಜನರ ಜಾಗೃತ ದಳ, ಸಹಾಯವಾಣಿ(08488-221235) ಸ್ಥಾಪಿಸಲಾಗಿದೆ.

ಇನ್ನು ಮಾದರಿ ನೀತಿ ಸಂಹಿತೆ ತಾಲೂಕಿಗೆ ಮಾತ್ರ ಸೀಮಿತವಾಗಿರುತ್ತೆ. ಕೋವಿಡ್ ಮಾರ್ಗಸೂಚಿ ಹಿನ್ನೆಲೆಯಲ್ಲಿ ರೋಡ್ ಶೋ ಪ್ರಚಾರ ಇರುವುದಿಲ್ಲವೆಂದು ತಿಳಿಸಿದ್ದಾರೆ. ಈ ವೇಳೆ ಸಹಾಯಕ ಚುನಾವಣಾಧಿಕಾರಿ ಸಂಜೀವಕುಮಾರ ದಾಸರ ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!