ನಶೆಯಲ್ಲಿದ್ದ ಸಿಂದಗಿ ಪುರಸಭೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

708

ಸಿಂದಗಿ: ಪಟ್ಟಣದ ತಾಲೂಕು ಪಂಚಾಯ್ತಿ ಸಭಾ ಭವನದಲ್ಲಿ ತಾಲೂಕು ಮಟ್ಟದ ಕುಂದು ಕೊರತೆ ಸಭೆ ನಡೆಯಿತು. ಎಡಿಜಿಪಿ ಕರ್ನಾಟಕ ಲೋಕಾಯುಕ್ತ ಬೆಂಗಳೂರು ಇವರ ನಿರ್ದೇಶನದಂತೆ ಸಭೆ ನಡೆಯಿತು. ಲೋಕಾಯುಕ್ತ ಡಿವೈಎಸ್ಪಿ ಬಸವರಾಜ ಯಲಿಗಾರ, ಸಾರ್ವಜನಿಕರ ಕುಂದು ಕೊರತೆ ಕುರಿತು ಅಹವಾಲು ಸ್ವೀಕರಿಸಿದ್ರು.

ನಾಲ್ಕು ವರ್ಷಗಳಿಂದ ಮುಗಿಯದ ಫೋಡಿ ಪ್ರಕರಣದ ಬಗ್ಗೆ ಮಾತ್ನಾಡಿದ ಅಧಿಕಾರಿ, ತಾಲೂಕು ಡಿಎಲ್ಆರ್ ಅವರಿಗೆ ತುರ್ತು ಕ್ರಮ ಕೈಗೊಳ್ಳಬೇಕೆಂದು ಎಚ್ಚರಿಕೆ ನೀಡಿದ್ರು. ಪುರಸಭೆ ಸಿಬ್ಬಂದಿ ಕುಡಿದ ಘಟನೆಗೆ ಸಂಬಂಧಿಸಿದಂತೆ ದೂರುದಾರ ಜಬ್ಬರ ನಾಯಕ, ಪುರಸಭೆ ಮುಖ್ಯಾಧಿಕಾರಿ ಕ್ರಮ ವಹಿಸಿದ ಬಗ್ಗೆ ಗಮನಕ್ಕೆ ತಂದ್ರು. ವೈದ್ಯಕೀಯ ತಪಸಣೆಯಲ್ಲಿ ಅವರು ನಶೆಯಲ್ಲಿರುವುದು ಸಾಬೀತಾಗಿದ್ದು. ಯಾಕೆ ಕ್ರಮ ಕೈಗೊಂಡಿಲ್ಲವೆಂದು ಪುರಸಭೆ ಮುಖ್ಯಾಧಿಕಾರಿಯವರನ್ನ ಭರ್ಜರಿಯಾಗಿ ಕ್ಲಾಸ್ ತೆಗೆದುಕೊಂಡ್ರು. ಅವರ ಮೇಲೆ ತಕ್ಷಣ ಕ್ರಮ ಕೈಗೊಳ್ಳಲು ಸೂಚಿಸಿದ್ರು.

ಸಭೆಯಲ್ಲಿ ಪುನರ್ವಸತಿ ಗ್ರಾಮ ವಿಭೂತಹಳ್ಳಿಯಲ್ಲಿ ಮನೆ ಹಂಚಿಕೆ ಅಸಮರ್ಪಕ ಸರ್ವೆ ಬಗ್ಗೆ ಸಾಮಾಜಿಕ ಸೇವಾ ಕಾರ್ಯಕರ್ತ, ಸಲೀಂ ಅಲ್ದಿ ಆರೋಪಿಸಿದ್ರು. ಇದನ್ನ ಕೇಳಿದ ಲೋಕಾಯುಕ್ತ ಡಿವೈಎಸ್ಪಿ ಬಸವರಾಜ ಯಲಿಗಾರ ಅವರು, ತಾಲೂಕು ಪಂಚಾಯ್ತಿ ಎಡಿ ಸುನೀಲ ಮುದ್ದಿನ ಅವರನ್ನ ತರಾಟೆಗೆ ತೆಗೆದುಕೊಂಡ್ರು. ಏನ್ರಿ ಇದು, ಪಿಡಿಒ ಸ್ಟ್ರಾಂಗಾ ಇಒ ಸ್ಟ್ರಾಂಗಾ ಎಂದು ಪ್ರಶ್ನಿಸಿದ್ರು. ನಾಲ್ಕು ತಿಂಗಳಿನ ಈ ಕೆಲಸಕ್ಕೆ ಫಾಲೋಅಪ್ ಮಾಡಬೇಕಾದ ಇಒ ಕರ್ತವ್ಯ ಮರೆತ್ರೆ ಹೇಗೆ ಎಂದು ತರಾಟೆಗೆ ತೆಗೆದುಕೊಂಡ್ರು. ತಕ್ಷಣ ಕ್ರಮ ಮಾಡಿ. ತಪ್ಪಿದ್ರೆ ದೂರದಾರನಿಗೆ ವಿಜಯಪುರಕ್ಕೆ ಬರಲು ಹೇಳಿ ಎಂದ್ರು.

ವಾರದೊಳಗೆ ತಾಲೂಕಿನ ಪ್ರತಿ ಕಚೇರಿಗಳಲ್ಲಿ ಮಾಹಿತಿ ಹಕ್ಕು ಅದಿನಿಮಯದಡಿ ಸಂಪರ್ಕಿಸಬೇಕಾದ ಅಧಿಕಾರಿ ಹೆಸರು, ಲೋಕಾಯುಕ್ತ ಮತ್ತು ಎಸಿಬಿಯವರ ಸಂಪರ್ಕ ನಂಬರ್ ಗಳ ಬೋರ್ಡ್ ಗಳನ್ನ ಕಡ್ಡಾಯವಾಗಿ ಹಾಕಬೇಕೆಂದು ಸೂಚಿಸಿದ್ರು. ತಪ್ಪದ್ದಲ್ಲಿ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ರು.

ಸಭೆಯಲ್ಲಿ ಸಂದಗಿ ತಹಶೀಲ್ದಾರ್ ಬಿ.ಎಸ್ ಕಡಬಾವಿ, ದೇವರಹಿಪ್ಪರಗಿ ತಹಶೀಲ್ದಾರ್ ವೈ.ಬಿ ನಾಗಠಾಣ, ತಾಳಿಕೋಟಿ ತಹಶೀಲ್ದಾರ್ ಅನೀಲ ಢವಳಗಿ, ಜಿಲ್ಲಾ ಲೋಕಾ ಸಿಪಿಐ ರಮೇಶ ಅವಜಿ, ಸಿಂದಗಿ ಸಿಪಿಐ ಸತೀಶ ಕಾಂಬಳೆ ಸೇರಿದಂತೆ ತಾಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ರು.


TAG


Leave a Reply

Your email address will not be published. Required fields are marked *

error: Content is protected !!