ಯುವತಿಯರ ಕಳ್ಳ ಸಾಗಾಟದ ಆಸಾಮಿ ಅರೆಸ್ಟ್

366

ಪ್ರಜಾಸ್ತ್ರ ಅಪರಾಧ ಸುದ್ದಿ

ಬೆಂಗಳೂರು: ಕೆಲಸ ಕೊಡಿಸುವುದಾಗಿ ನಂಬಿಸಿ ಹೆಣ್ಮಕ್ಕಳನ್ನ ಕಳ್ಳ ಸಾಗಾಟ ಮಾಡ್ತಿದ್ದ ವ್ಯಕ್ತಿಯನ್ನ ಬಂಧಿಸಲಾಗಿದೆ. ಸಿಸಿಬಿ ಪೊಲೀಸರ ಬಲೆಗೆ ಬಸವರಾಜು ಶಂಕರಪ್ಪ ಕಳಸದ ಎಂಬಾತ ಬಿದಿದ್ದು, ವಿಚಾರಣೆ ನಡೆಸಲಾಗ್ತಿದೆ.

ಕೆಲಸ ಕೊಡಿಸುವ ನೆಪದಲ್ಲಿ ಹೊರರಾಜ್ಯಗಳ ಯುವತಿಯರನ್ನ ಸಂಪರ್ಕಿಸಿ, ಡ್ಯಾನ್ಸ್ ಬಾರ್ ಗಳಿಗೆ ಸರಬರಾಜು ಮಾಡ್ತಿದ್ದ. ಅಲ್ದೇ, ಯುಎಇ ಹಾಗೂ ಫ್ಯೂಜಾರಿ ದೇಶಗಳಿಗೂ ಅಕ್ರಮವಾಗಿ ಸಾಗಾಟ ಮಾಡ್ತಿದ್ದ ಎಂದು ತಿಳಿದು ಬಂದಿದೆ.

ಇನ್ನು ಆರೋಪಿ, ತಾನು ಹಲವು ಚಿತ್ರಗಳಲ್ಲಿ ಸೈಡ್ ರೋಲ್ ಮಾಡಿದ್ದು, ಕ್ಯಾಮೆರಾ, ಪ್ರೊಡೆಕ್ಷನ್ ವರ್ಕ್ ಮಾಡ್ತೀನಿ ಎಂದು ಹೇಳಿ, ಸ್ಟಾರ್ ನಟರ ಜೊತೆಗೆ ತೆಗೆಸಿಕೊಂಡ ಫೋಟೋ ತೋರಿಸಿ ವಂಚಿಸ್ತಿದ್ದ. ಈ ಫೋಟೋಗಳ ಮೂಲಕ ಹುಡ್ಗಿಯರನ್ನ, ಮಹಿಳೆಯರನ್ನ ಯಾಮಾರಿಸ್ತಿದ್ದ. ಈತನ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!