ಸಾಮಾಜಿಕ ಅಂತರ ಪಾಲಿಸಿದ ಹಸು!

382

ಬಸವನಬಾಗೇಡಿ: ಕರೋನಾದಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ತುಂಬಾ ಮುಖ್ಯವಾಗಿದೆ. ಅದು ಬರೀ ಲಾಕ್ ಡೌನ್ ಮುಗಿಯವರೆಗೆ ಮಾತ್ರವಲ್ಲ, ವರದಿ ಪ್ರಕಾರ 2022ರ ತನಕ ಎನ್ನಲಾಗ್ತಿದೆ. ಆದ್ರೆ, ಬುದ್ದಿ ಇರುವ ಮನುಷ್ಯ ಇದನ್ನ ಮರೆತು ನಡೆದುಕೊಳ್ತಿರುವುದು ನೋಡ್ತಿದ್ದೇವೆ. ಆದ್ರೆ, ಇಲ್ಲೊಂದು ಹಸು ಸಾಮಾಜಿಕ ಅಂತರ ಪಾಲಿಸಿದೆ!

ವಿಜಯಪುರ ಜಿಲ್ಲೆಯ ಬಸವನಾಡು ಬಸವನಬಾಗೇವಾಡಿಯಲ್ಲಿ ಹಸುವೊಂದು ಅಂಗಡಿ ಮುಂದೆ, ಸಾಮಾಜಿಕ ಅಂತರದ ಗುರುತು ಹಾಕಿದ ಜಾಗದಲ್ಲಿ ಮುಂದಿನ ತನ್ನೆರಡು ಕಾಲುಗಳನ್ನಿಟ್ಟು ನಿಂತುಕೊಂಡಿರುವ ದೃಶ್ಯ ಕಂಡು ಬಂದಿದೆ. ಕಿರಾಣಿ ಅಂಗಡಿ ಮುಂದೆ ನಿಂತು ತಿನ್ನುವುದಕ್ಕೆ ಬೇಡ್ತಿರುವ ಹಸುವಿನ ಚಿತ್ರ ಒಂದಿಷ್ಟು ವೈರಲ್ ಆಗಿದೆ.

ಪುರಸಭೆಯವರು ಕಾಯ್ದಿರಿಸಿದ ಬಾಕ್ಸ್ ನಲ್ಲಿ ಮೇಲೆ ನಿಂತು ಸಾಮಾಜಿಕ ಅಂತರ ಕಾಯ್ದುಕೊಂಡಿರುವುದು ಕಾಣಿಸುತ್ತೆ. ಇದು ಹೀಗೆ ಸುಮ್ಮನೆ ಅಚಾನಕ್ ಆಗಿ ಗುರುತು ಹಾಕಿದ ಜಾಗದಲ್ಲಿಯೇ ನಿಂತಿದೆಯಾ.. ಸಾಮಾಜಿಕ ಅಂತರವೆಂದು ನಿಂತಿದೆಯಾ ಅದು ಬೇರೆ ವಿಚಾರ. ಆದ್ರೆ, ತಿಳುವಳಿಕೆಯಿರುವ ನಾವುಗಳು ಪ್ರಾಣಿಗಳಿಂದ ಸಾಕಷ್ಟು ಸಾರಿ ಕಲಿಯುವುದು ತುಂಬಾ ಇದೆ ಅನ್ನೋದಕ್ಕೆ ಉದಾಹರಣೆಯಿದು.




Leave a Reply

Your email address will not be published. Required fields are marked *

error: Content is protected !!