ಟೆಸ್ಟ್ ಕ್ರಿಕೆಟ್ ನಲ್ಲಿ ಜಡೇಜಾ ವಿಶ್ವ ದಾಖಲೆ

409

ಟೆಸ್ಟ್ ಕ್ರಿಕೆಟ್ ದುನಿಯಾದಲ್ಲಿ ಭಾರತ ತಂಡದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ವಿಶ್ವದಾಖಲೆ ಮಾಡಿದ್ದಾರೆ. ಅದೇನಂದ್ರೆ, ಅತಿವೇಗವಾಗಿ 200 ವಿಕೆಟ್ ಪಡೆದ ಭಾರತದ ಎರಡನೇ ಬೌಲರ್ ಆಗಿದ್ದಾರೆ.

Image result for ravindra jadeja 200 wickets
200 ವಿಕೆಟ್ ಪಡೆದ ಖುಷಿಯಲ್ಲಿ ಜಡೇಜಾ

ವಿಶಾಖಪಟ್ಟಣಂನಲ್ಲಿ ಸೌಥ್ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಡೀನ್ ಎಲ್ಗರ್ ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ. 44 ಟೆಸ್ಟ್ ಪಂದ್ಯಗಳಲ್ಲಿ ಜಡೇಜಾ 200 ವಿಕೆಟ್ ಪಡೆದಿದ್ದಾರೆ. ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 37 ಪಂದ್ಯಗಳಲ್ಲಿ 200 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ಕನ್ನಡಿಗ ಅನಿಲ ಕುಂಬ್ಳೆ 46 ಪಂದ್ಯ, ಹರ್ಭಜನ್ ಸಿಂಗ್ 47 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 385 ರನ್ ಗಳಿಸಿದೆ. ಡೀನ್ ಎಲ್ಗರ್ ಭರ್ಜರಿ 160 ಹಾಗೂ ಕ್ವಿಂಟನ್ ಡಿ ಕಾಕ್ 111 ಶತಕದಾಟದ ನೆರವಿನಿಂದ ಉತ್ತಮ ಸ್ಕೋರ್ ಮಾಡಿದೆ. ಭಾರತದ ಮೊದಲ ಇನ್ನಿಂಗ್ಸ್ ನಲ್ಲಿ 502 ರನ್ ಗಳ ಟಾರ್ಗೆಟ್ ನೀಡಿದೆ. ಹೀಗಾಗಿ ಸೌಥ್ ಆಫ್ರಿಕಾ ಇನ್ನು 117 ರನ್ ಗಳ ಹಿನ್ನೆಡೆಯಲ್ಲಿದೆ.

ಅಶ್ವಿನ್ 5, ಜಡೇಜಾ 2 ಹಾಗೂ ಇಶಾಂತ ಶರ್ಮಾ 1 ವಿಕೆಟ್ ಪಡೆದು ಮಿಂಚಿದ್ರು.




Leave a Reply

Your email address will not be published. Required fields are marked *

error: Content is protected !!