ಪತ್ರಕರ್ತ ಮಲ್ಲಿಕಾರ್ಜುನ ಕೆಂಭಾವಿ ಸೇರಿ ಐವರಿಗೆ ‘ಯುವ ಚೈತನ್ಯ’ ಪ್ರಶಸ್ತಿ

558

ಸಿಂದಗಿ: ತಾಲೂಕಿನ ಹಂದಿಗನೂರ ಗ್ರಾಮದಲ್ಲಿ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಸ್ವಾಮಿ ವಿವೇಕಾನಂದರ ಜಯತ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ವೇಳೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಗಿರೀಶ ಭದ್ರಗೊಂಡ(ಕೃಷಿ ಸಂಶೋಧಕರು), ಕೆಂಚಪ್ಪ ಮಳ್ಳಿ(ಸೈನಿಕರು), ಮಲ್ಲಿಕಾರ್ಜುನ ಕೆಂಭಾವಿ ಬ್ರಹ್ಮದೇವನಮಡು(ಪತ್ರಿಕೋದ್ಯಮ) ರವಿ ನಾಗರಾಳ(ಸಮಾಜಸೇವೆ) ಹಾಗೂ ಧರ್ಮಸ್ಥಳ ಮೇಲ್ವಿಚಾರಕರು, ಕೋರವಾರ ವಲಯದ ಉಮೇಶ ಡಿ(ಸಮಾಜ ಸೇವೆ) ಇವರಿಗೆ ‘ಯುವ ಚೈತನ್ಯ’ ಪ್ರಶಸ್ತಿ ನೀಡಿ ಗೌರವಿಸಾಯ್ತು. ಇದೇ ವೇಳೆ ಎಸ್ಎಸ್ಎಲ್ ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯ್ತು.

ಬೋರಗಿ-ಪುರದಾಳದ ತಪೋರತ್ನಂ ಶ್ರೀ ಮಹಾಲಿಂಗೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿದ್ಯ ವಹಿಸಿಕೊಂಡಿದ್ರು. ಘನ ಅಧ್ಯಕ್ಷತೆಯನ್ನ ಕೋರವಾರದ ಚೌಕಿಮಠದ ಶ್ರೋ ಬ್ರ ಕಾಶಿಲಿಂಗ ಸ್ವಾಮಿಗಳು, ಜಯ ಕರ್ನಾಟಕದ ರಾಜ್ಯ ಮುಖಂಡರಾದ ವಿಜುಗೌಡ ಎನ್ ಬಿರಾದಾರ ವಹಿಸಿಕೊಂಡಿದ್ರು. ಪ್ರಭುಗೌಡ ಪಾಟೀಲ, ಬಸಣ್ಣ ದೇವಣಗಾಂವ, ಭೀಮಣ್ಣ ನಾಯ್ಕೋಡಿ,  ಬಸನಗೌಡ ಚನಗೊಂಡ, ಚನ್ನಪ್ಪಗೌಡ ಬಿರಾದಾರ, ಸಾಹೇಬಗೌಡ ಬಿರಾದಾರ, ಶಾಂತಪ್ಪ ಹುಣಸಗಿ, ಸಿದ್ದಣ್ಣ ಪಟ್ಟಣಶೆಟ್ಟಿ, ವಿಠ್ಠಲ ಅರ್ಜುನಗಿ,  ಕಲ್ಲಣ್ಣ ದೇಸಾಯಿ, ಅಶೋಕ ಅಂಚೆಗಾವಿ, ಮಡಿವಾಳಯ್ಯ ಹಿರೇಮಠ, ಮಡಿವಾಳಪ್ಪಗೌಡ ಬಿರಾದಾರ, ಅರವಿಂದ ದೇಸಾಯಿ, ನಿಂಗನಗೌಡ ಬಿರಾದಾರ,  ಭೀರಲಿಂಗ ದಿಂಡವಾರ, ಕುಮಾರ ಮುಳವಾಡ, ಮಡು ರೋಡಗಿ, ಸೋಮನಗೌಡ ಬಿರಾದಾರ, ಚಂದು ಡಾಂಗಿ, ಮಂಜುನಾಥ ಹಡಪದ, ಗುರುರಾಜ ಚೌಧರಿ, ನಿಕೀಲ ಚನಗೊಂಡ ಉಪಸ್ಥಿತರಿದ್ರು. ನಾಗಪ್ಪ ಅಗರಸರ ಸ್ವಾಗತಿಸಿದ್ರು. ಶ್ರೀಶೈಲ ಚನಗೊಂಡ ನಿರೂಪಿಸಿದರು. ಅನೀಲ ಬಿರಾದಾರ ವಂದಿಸಿದರು.




Leave a Reply

Your email address will not be published. Required fields are marked *

error: Content is protected !!