ಯುವಜನತೆಗೆ ವಿವೇಕಾನಂದರ ಮಹತ್ವ ತಿಳಿಸಬೇಕಿದೆ: ಅಭಿನವ ಗುರುಲಿಂಗಜಂಗಮ ಸ್ವಾಮೀಜಿ

227

ಪ್ರಜಾಸ್ತ್ರ ಸುದ್ದಿ

ಜಮಖಂಡಿ: ತಾಲೂಕಿನ ಸಾವಳಗಿ ಗ್ರಾಮದ ಶ್ರೀ ಬನಶಂಕರಿ ಪಬ್ಲಿಕ್ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 160ನೇ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ರಾಮಲಿಂಗೇಶ್ವರ ಸಂಸ್ಥಾನಮಠ ಕಕಮರಿಯ ಸದ್ಗುರು ಅಭಿನವ ಗುರುಲಿಂಗಜಂಗಮ ಮಹಾಸ್ವಾಮಿಗಳು ಉದ್ಘಾಟಿಸಿದರು.

ಯುವಜನತೆಗೆ ವಿವೇಕಾನಂದರ ಜೀವನದ ಮಹತ್ವವನ್ನು ತಿಳಿಸಿಕೊಡುವ ಕೆಲಸ ಮಾಡಬೇಕಿದೆ. ವಿಶ್ವದ ಆಧ್ಯಾತ್ಮಿಕತೆಯ ಸಂಕೇತದಂತಿರುವ ಹಿಂದೂ ಧರ್ಮದಲ್ಲಿನ ಸಹಭಾಳ್ವೆ, ಶಾಂತಿ ಸಂದೇಶಗಳನ್ನು ಎಲ್ಲರಿಗೂ ತಿಳಿಸುವುದೇ ನಾವು ವಿವೇಕಾನಂದರಿಗೆ ಸಲ್ಲಿಸುವ ಗೌರವವಾಗಿದೆ ಎಂದು ಸ್ವಾಮೀಜಿ ಹೇಳಿದರು.

ನಾವು ಭಾರತದ ಬಗ್ಗೆ ತಿಳಿಯಬೇಕಾದರೆ ಮೊದಲಿಗೆ ವಿವೇಕಾನಂದರ ಜೀವನ ಚರಿತ್ರೆಯ ಅಧ್ಯಯನ ಮಾಡಬೇಕು. ಏಕೆಂದರೆ ಸಾಮಾನ್ಯರೂ ಕೂಡಾ ವಿವೇಕಾನಂದರ ಪುಸ್ತಕಗಳನ್ನು ಓದಿ ಐಎಎಸ್‌, ಐಪಿಎಸ್‌ ಸೇರಿದಂತೆ ಅತ್ಯುನ್ನತ ಹುದ್ದೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದು ಯಲ್ಲಟ್ಟಿ ಕೊಣ್ಣೂರ ವಿಜ್ಞಾನ ಪಿಯು ಕಾಲೇಜಿನ ಸಂಸ್ಥಾಪಕ ಬಿ.ಕೆ. ಕೊಣ್ಣೂರ ಹೇಳಿದರು.

ಸರ್ಕಾರಿ ಪಿ.ಬಿ ಪಿಯು ಕಾಲೇಜಿನ ಶಿಕ್ಷಕರಾದ ಡಾ. ಲಿಂಗಾನಂದ ಕೆ ಗವಿಮಠ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಛಲ ಇರಬೇಕು. ಭಯ ಇರಬಾರದು. ಸಿಂಹದಂತೆ ಧೈರ್ಯ ಇರಬೇಕು. ಅಂದಾಗ ಮಾತ್ರ ನೀವೂ ಸ್ವಾಮಿ ವಿವೇಕಾನಂದರಂತೆ ಆಗುತ್ತೀರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಜಯಂತಿ ಪ್ರಯುಕ್ತ ವಿಜ್ಞಾನ ವಸ್ತುಗಳ ಪ್ರಯೋಗ ಹಾಗೂ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತೋಶ್ರೀ ಶ್ರೀ ಶಾರದಾ ಸೇವಾ ಸಮಿತಿ ಸಾವಳಗಿ-ಜಮಖಂಡಿ ಸಂಚಾಲಕ ನಾರಾಯಣ ಕುಲಕರ್ಣಿ, ಸಿ.ಆರ್.ಪಿ ಗೀರಿಶ ಗಳವೆ, ಪ್ರಾಂಶುಪಾಲರು, ಸಿಬ್ಬಂದಿ ಹಾಗೂ ವಿವಿಧ ಶಾಲೆಯ ಶಿಕ್ಷಕ, ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.




Leave a Reply

Your email address will not be published. Required fields are marked *

error: Content is protected !!