ಪ್ರಜಾಸ್ತ್ರ ಸುದ್ದಿ
ಹೈದ್ರಾಬಾದ್: ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ.ಸಿ ಚಂದ್ರಶೇಖರ್ ರಾವ್, ಮನೆಯಲ್ಲಿ ಕಾಲು ಜಾರಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಾರಿಬಿದ್ದ ಪರಿಣಾಮ ಸೊಂಟಕ್ಕೆ ಹಾನಿಯಾಗಿದ್ದು, ಸಣ್ಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಸಂಪೂರ್ಣ ಗುಣಮುಖರಾಗಲು 6 ರಿಂದ 8 ವಾರ ತೆಗೆದುಕೊಳ್ಳುತ್ತೆ ಎಂದು ತಿಳಿದು ಬಂದಿದೆ.
ಸೋಮಾಜಿಗುಡಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಧ್ಯ ಅವರ ಆರೋಗ್ಯ ಸ್ಥಿರವಾಗಿದೆ. ವೈದ್ಯರ ಪರೀಕ್ಷೆ ಬಳಿಕ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಲಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಎದುರು ಕೆಎಸ್ಆರ್ ನಾಯಕತ್ವದ ಬಿಆರ್ ಎಸ್ ಸೋಲು ಅನುಭವಿಸಿದೆ.