ಮೌಲ್ವಿಗೂ ನನ್ನ ಕುಟುಂಬಕ್ಕೂ ಸಂಬಂಧವಿಲ್ಲ: ಯತ್ನಾಳ

165

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಮೌಲ್ವಿ ಜೊತೆಗೆ ವ್ಯವಹಾರ ಇದೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ, ಮೌಲ್ವಿಗೂ ನನ್ನ ಕುಟುಂಬಕ್ಕೂ ಸಂಬಂಧವಿಲ್ಲ. 50-60 ವರ್ಷ ಹಿಂದಿನ ಲೀಸ್ ಆಸ್ತಿ ಅದು. ಅದು ಮುನ್ಸಿಪಲ್ ಆಸ್ತಿಯಾಗಿದೆ. ಮೂಲ ಮಾಲೀಕರು ನಮ್ಮ ತಂದೆಯಾಗಿದ್ದರು. ಅವರೊಂದಿಗೆ ನಾಲ್ಕೈದು ಜನರಿದ್ದರು ಎಂದಿದ್ದಾರೆ.

ಆಸ್ತಿಯಲ್ಲಿ ನಾನು ಪಾಲುದಾರನಿದ್ದೇನೆ ಎಂದಿರುವವರ ವಿರುದ್ಧ ಮಾನನಷ್ಟ ಮೊಕದ್ದಮ್ಮೆ ಹೂಡುತ್ತೇನೆ. ಎನ್ಐಎ ಅಧಿಕಾರಿಗಳಿಗೆ ಮಾಹಿತಿ ನೀಡುತ್ತೇನೆ. ಇದೆಲ್ಲದರ ಕುರಿತು ತನಿಖೆಯಾಗಲಿ. ನಿನ್ನೆ ಒಂದಿಷ್ಟು ಮಾಹಿತಿ ನೀಡಿದ್ದೇನೆ. ಇನ್ನು ಸಿಗುತ್ತವೆ ಅಂತಾ ಹೇಳುವ ಮೂಲಕ ತಮ್ಮ ವಿರುದ್ಧದ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!