ಬ್ರೇಕಿಂಗ್ ನ್ಯೂಸ್
Search

‘ಲಂಚ’ಶೂರರ ದರ್ಪಕ್ಕೆ ದುಡಿಯೋ ಬಾಲಕನ ಸ್ಥಿತಿ ನೋಡಿ

543

ಪ್ರಜಾಸ್ತ್ರ ಸುದ್ದಿ

ಇಂದೋರ್: ಈ ದೇಶದಲ್ಲಿ ಲಂಚ ಅನ್ನೋದು ಕರುಣೆಯಿಲ್ಲದ, ಮನುಷ್ಯತ್ವ ಇಲ್ಲದ ರಾಕ್ಷಸನಿದ್ದಂತೆ. ಹೀಗಾಗಿಯೇ ಅನೇಕ ಸರ್ಕಾರಿ ಅಧಿಕಾರಿಗಳು ಕೈ ಚಾಚುತ್ತಾರೆ. ನೀಡ್ಲಿಲ್ಲಂದ್ರೆ, ಮೃಗೀಯ ರೀತಿ ವರ್ತಿಸ್ತಾರೆ. ಕರೋನಾದಿಂದ ಜನರ ಬದುಕು ದುಸ್ತರವಾಗದೆ. ಹೀಗಾಗಿ ಮಕ್ಕಳು ಸಹ ಸಣ್ಣಪುಟ್ಟ ಕೆಲಸ ಮಾಡಿ ಕುಟುಂಬಕ್ಕೆ ನೆರವಾಗ್ತಿವೆ.

ಮಧ್ಯಪ್ರದೇಶದ ಇಂದೋರ್ ನಲ್ಲಿ 14 ವರ್ಷದ ಬಾಲಕ ತಳ್ಳೋಗಾಡಿಯಲ್ಲಿ ಮೊಟ್ಟೆ ವ್ಯಾಪಾರ ಮಾಡ್ತಿದ್ದ. ಹೀಗೆ ಬೀದಿಬದಿಯಲ್ಲಿ ವ್ಯಾಪಾರ ಮಾಡೋ ಹುಡ್ಗನಿಗೆ ದಿನಕ್ಕೆ 100 ರೂಪಾಯಿ ಕೊಡು ಎಂದು ಕೇಳಿದ್ದಾರೆ. ವ್ಯಾಪಾರವಾಗುವುದೇ ಕಷ್ಟ. ಬರೋ ದುಡ್ಡಲ್ಲಿ ಜೀವನ ನಡೆಸೋದು ಇನ್ನು ಕಷ್ಟ. ಹೀಗಾಗಿ ಬಾಲಕ ಕೊಡಲು ಆಗಲ್ಲ ಅಂದಿದ್ದಾನೆ. ಅದಕ್ಕೆ ನೀಚ ಪುರಸಭೆ ಅಧಿಕಾರಿಗಳು ತಳ್ಳೋಗಾಡಿಯನ್ನ ಬೀಳಿಸಿ ಎಲ್ಲ ಮೊಟ್ಟೆಗಳನ್ನ ಒಡೆದು ಹಾಕಿದ್ದಾರೆ.

ಪುರಸಭೆ ದುಷ್ಟ ಅಧಿಕಾರಿಗಳ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಬಾಲಕ ಕೂಗಿದ್ರೂ ನಿಲ್ಲದೆ ಹೋಗುವ ದೃಶ್ಯ ಕಾಣಿಸುತ್ತೆ. ಇಂಥ ನೀಚರಿಗೆ ಕಠಿಣ ಶಿಕ್ಷೆ ನೀಡಬೇಕು ಅನ್ನೋ ಕೂಗು ಎದ್ದಿದೆ. ಕೆಲವರು ಅವನಿಗೆ ಸಹಾಯ ಮಾಡ್ತೀವಿ. ಅವನ ಬಗ್ಗೆ ಮಾಹಿತಿ ಕೊಡಿ ಎಂದು ಕಾಮೆಂಟ್ ಮಾಡ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!