ಎಸ್ಟಿಗಾಗಿ ತಳವಾರ ಸಮುದಾಯ ಧರಣಿ: ಸಿಎಂ ಕರೆತರುವ ಭರವಸೆ

759

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ತಳವಾರ ಹಾಗೂ ಪರಿವಾರ ಸಮುದಾಯದ ಸಮಸ್ಯೆಯನ್ನ ಗಂಭೀರವಾಗಿ ಪರಿಗಣಿಸಿ ಕೂಡಲೇ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡಲಾಗುವುದು ಎಂದು ಸಂಸದ ಡಾ.ಉಮೇಶ ಜಾಧವ ಹೇಳಿದ್ದಾರೆ.

ತಳವಾರ ಪರಿವಾರ ಎಸ್ಟಿ ಹೋರಾಟ ಸಮಿತಿ ಹಮ್ಮಿಕೊಂಡಿರುವ ಅನಿಧಿಷ್ಟಾವಧಿ ಧರಣಿಯ 15 ದಿನವಾದ ಇಂದು ಹೋರಾಟಕ್ಕೆ ಬೆಂಬಲ ಸೂಚಿಸಿ ಸಂಸದರು ಮಾತ್ನಾಡಿದ್ರು. ಸಂಸತ್ ಅಧಿವೇಶನದ ಶೂನ್ಯ ವೇಳೆಯಲ್ಲಿ ತಳವಾರ, ಪರಿವಾರ ಸಮಾಜಕ್ಕೆ ಆಗ್ತಿರುವ ಅನ್ಯಾದ ಕುರಿತು ಪ್ರಶ್ನೆ ಮಾಡುತ್ತೇನೆ. ಅಲ್ದೇ, ಸೆಪ್ಟೆಂಬರ್ 17ರಂದು ಪ್ರತಿಭಟನಾ ಸ್ಥಳಕ್ಕೆ ಮುಖ್ಯಮಂತ್ರಿಗಳನ್ನು ಕರೆದುಕೊಂಡು ಬರುವ ಪ್ರಯತ್ನ ಮಾಡುತ್ತೇನೆ ಎಂದರು.

ಕೇಂದ್ರ ಸರ್ಕಾರ ಈಗಾಗಲೇ ಈ ಸಮುದಾಯಗಳನ್ನ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರಿಸಿ ರಾಜ್ಯಪತ್ರ ಹೊರಡಿಸಿದೆ. ಆದರೆ ರಾಜ್ಯದಲ್ಲಿ ಯಾವುದೋ ಗೊಂದಲದಿಂದ ನಿಮಗೆ ಪ್ರಮಾಣ ಪತ್ರ ಸಿಗುತ್ತಿಲ್ಲ. ಖುದ್ದಾಗಿ ನಾನು ಮುಖ್ಯಮಂತ್ರಿಗಳವರ ಗಮನಕ್ಕೆ ತರುತ್ತೇನೆ. ಸಪ್ಟಂಬರ್ 17ರಂದು ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಗೆ ಆಗಮಿಸಲಿರುವ ಮುಖ್ಯಮಂತ್ರಿಗಳವರಿಗೆ ನಿಮ್ಮ ಪ್ರತಿಭಟನಾ ಸ್ಥಳಕ್ಕೆ ಕರೆದುಕೊಂಡು ಬರುತ್ತೇವೆ ಎಂದು ಹೇಳಿದ್ರು.

ಈ ಸಂದರ್ಭದಲ್ಲಿ ಡಾ.ಸರ್ದಾರ ರಾಯಪ್ಪ, ರಾಜೇಂದ್ರ ರಾಜವಾಳ, ಚಂದ್ರಶೇಖರ ಜಮಾದಾರ, ಸುನಿತಾ ತಳವಾರ, ಶಿವು ಸುಣಗಾರ, ಸಾಯಿಬಣ್ಣ ಜಾಲಗಾರ, ದಿಗಂಬರ ಕಾಡಪ್ಪಗೋಳ, ಶರಣು ಕೋಲಿ, ದಿಗಂಬರ ಡಾಂಗೆ, ಚಂದ್ರಕಾಂತ ಗಂವ್ಹಾರ, ಅನಿಲ ವಚ್ಚಾ ಸೇರಿ ಅನೇಕರಿದ್ರು.




Leave a Reply

Your email address will not be published. Required fields are marked *

error: Content is protected !!