ನಟ ವಿಶಾಲ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್

353

ವಿಶಾಲ ಫಿಲ್ಮ್ ಕಾರ್ಖಾನೆ ಮಾಲೀಕ ನಟ ವಿಶಾಲ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ. ವಿಶಾಲ ಫಿಲ್ಮ್ ಕಾರ್ಖಾನೆ ಕಳೆದ ಐದು ವರ್ಷಗಳಿಂದ ಟಿಡಿಎಸ್ ಪಾವತಿಸಿಲ್ಲ. ಈ ಬಗ್ಗೆ ಐಟಿ ಅಧಿಕಾರಿಗಳು ಸಲ್ಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟಿಯನ್ ಮ್ಯಾಜಿಸ್ಟ್ರೇಟ್ ಕೋರ್ಟ್-11ಗೆ ಹಾಜರಾಗದ ಕಾರಣ, ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಲಾಗಿದೆ.

ಕಳೆದ ಐದು ವರ್ಷಗಳಿಂದ ನೌಕರರಿಂದ ಕಡಿತಗೊಳಿಸಲಾಗಿರುವ ಟಿಡಿಎಸ್ ನ್ನ ಸರ್ಕಾರಿ ಖಾತೆಗೆ ಜಮಾ ಮಾಡಿಲ್ಲ. ಈ ಬಗ್ಗೆ ಪ್ರಕರಣ ದೇಖಲಾಗಿದೆ. ಎರಡು ಬಾರಿ ಸಮನ್ಸ್ ಜಾರಿ ಮಾಡಿದ್ರೂ ಕೋರ್ಟ್ ಗೆ ಹಾಜರಾಗದ ನಟ ವಿಶಾಲ ವಿರುದ್ಧ ಈ ಕ್ರಮ ತೆಗೆದುಕೊಳ್ಳಲಾಗಿದೆ. ಹೀಗಾಗಿ ನಟ ವಿಶಾಲಗೆ ಬಂಧನದ ಭೀತಿ ಶುರುವಾಗಿದೆ. ಅಲ್ದೇ, 2017ರಲ್ಲಿ ವಿಶಾಲ ಫಿಲ್ಮ್ ಕಾರ್ಖಾನೆ ಮೇಲೆ ಐಟಿ ದಾಳಿ ಸಹ ನಡೆದಿತ್ತು.




Leave a Reply

Your email address will not be published. Required fields are marked *

error: Content is protected !!