ಪ್ರಜಾಸ್ತ್ರ ಕ್ರೀಡಾ ಸುದ್ದ
ನವದೆಹಲಿ: ಕಳೆದ ಶುಕ್ರವಾರ ನಿಧನರಾದ ಫ್ಲೈಯಿಂಗ್ ಸಿಂಗ್ ಖ್ಯಾತಿಯ ಅಥ್ಲೀಟ್ ದಿಗ್ಗಜ ಮಿಲ್ಖಾ ಸಿಂಗ್ ಬದಲು, ಬಾಲಿವುಡ್ ನಟ ಫರ್ಹಾನ್ ಅಖ್ತಾರ್ ಫೋಟೋ ಹಾಕಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ನೋಯ್ಡಾದ ಮೈದಾನವೊಂದರಲ್ಲಿ ನಟ ಫರ್ಹಾನ್ ಫೋಟೋ ಹಾಕಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಿಲ್ಖಾ ಸಿಂಗ್ ಜೀವನಾಧರಿತ ಭಾಗ್ ಮಿಲ್ಕಾ ಭಾಗ್ ಅನ್ನೋ ಚಿತ್ರ ಬಾಲಿವುಡ್ ನಲ್ಲಿ ಬಂದಿದೆ. ಅದರಲ್ಲಿ ನಟ ಫರ್ಹಾನ್ ಅಖ್ತಾರ್ ನಟಿಸಿದ್ದಾರೆ. ರಿಯಲ್ ಅಥ್ಲೀಟ್ ದಿಗ್ಗಜನ ಫೋಟೋ ಬಿಟ್ಟು, ನಟ ಫೋಟೋ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆಗೆ ಕಾರಣವಾಗಿದೆ.