ಚಿಕ್ಕ ಸಿಂದಗಿಯಲ್ಲಿ ಕಳ್ಳರ ಕೈಚಳಕ: 10 ಲಕ್ಷ ಮೌಲ್ಯದ ಕಳ್ಳತನ

398

ಪ್ರಜಾಸ್ತ್ರ ಅಪರಾಧ ಸುದ್ದಿ

ಸಿಂದಗಿ: ತಾಲೂಕಿನ ಚಿಕ್ಕ ಸಿಂದಗಿ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ 5.30 ಗಂಟೆ ಸುಮಾರಿಗೆ ಕಳ್ಳರು ಕೈ ಚಳಕ ತೋರಿಸಿದ್ದು, ಚಿನ್ನಾಭರಣ ಹಾಗೂ ನಗದು ಸೇರಿದಂತೆ 10 ಲಕ್ಷಕ್ಕೂ ಅಧಿಕ ಮೌಲ್ಯದ ಕಳ್ಳತನ ನಡೆಸಲಾಗಿದೆ.

ಗ್ರಾಮದ ಶರಣಪ್ಪ ಚೆನ್ನಪ್ಪ ನಿಗಡಿ ಎಂಬುವರ ಮನೆಯಲ್ಲಿನ ಮಾಂಗಲ್ಯ ಸರ, ಚಪಲಾರ, ಪಾಟ್ಲಿ, ಕಿವಿ ಓಲೆ, ಲಾಕೇಟ್ ಸೇರಿ 5 ಲಕ್ಷದ 6 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 5 ಲಕ್ಷ ರೂಪಾಯಿ ನಗದು ಸೇರಿ 10 ಲಕ್ಷದ 6 ಸಾವಿರ ರೂಪಾಯಿ ಮೌಲ್ಯದ ಕಳ್ಳತನ ನಡೆದಿದೆ ಎಂದು ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!