ಕಾಟೇರ ಸಿನ್ಮಾ ನೋಡಿದ್ರಾ ಎಂದಿದ್ದಕ್ಕೆ ಕಿಚ್ಚ ಏನಂದರು?

163

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್ ನಡುವೆ ಏನಾಗಿದೆಯೋ ಅನ್ನೋದು ಅವರಿಗೆ ಗೊತ್ತು. ಅವರಿಬ್ಬರು ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳಬೇಕು ಎನ್ನುವುದು ಫ್ಯಾನ್ಸ್ ಆಸೆ. ಹೀಗಾಗಿ ಆಗಾಗ ಈ ಇಬ್ಬರ ನಟರಿಗೆ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಇದೀಗ ಡಿ ಬಾಸ್ ನಟನೆಯ ಕಾಟೇರ ಚಿತ್ರ ನೋಡಿದೀರಾ ಎಂದು ಅಭಿನಯ ಚಕ್ರವರ್ತಿಗೆ ಕೇಳಲಾಗಿದೆ.

ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ಮ್ಯಾಡ್ ಮ್ಯಾಕ್ಸ್ ಅಕೌಂಟ್ ಮೂಲಕ ಕಾಟೇರ ಯಾವಾಗ ನೋಡ್ತೀರಾ ಸರ್ ಎಂದು ಕೇಳಲಾಗಿದೆ. ಇದಕ್ಕೆ ಉತ್ತರಿಸಿರುವ ನಟ ಸುದೀಪ್, ನಾನು ಈಗಾಗಲೇ ನೋಡಿಲ್ಲ ಎಂದು ನಿಮಗೆ ಯಾರೂ ಹೇಳಿಲ್ವಾ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಹೀಗಾಗಿ ಸಹಜವಾಗಿ ಈ ಇಬ್ಬರು ಸ್ಟಾರ್ ನಟರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.




Leave a Reply

Your email address will not be published. Required fields are marked *

error: Content is protected !!