ನವವಧು ಮೇಲೆ ಅತ್ಯಾಚಾರಕ್ಕೆ ಯತ್ನ, ರಕ್ಷಣೆಗೆ ಬಂದ ತಾಯಿಗೆ ಇದೆಂಥಾ ಶಿಕ್ಷೆ?

417

ಬಿಹಾರ: ಅತ್ಯಾಚಾರಕ್ಕೆ ಯತ್ನಿಸಿದಾಗ ಅದಕ್ಕೆ ವಿರೋಧ ವ್ಯಕ್ತಪಡಿಸಿದ ತಾಯಿ ಹಾಗೂ ಮಗಳ ಮೇಲೆ ಹಲ್ಲೆ ನಡೆಸಿರುವ ಅತ್ಯಂತ ನೀಚ ಮತ್ತು ಅಮಾನವೀಯ ಘಟನೆ ಬಿಹಾರದಲ್ಲಿ ನಡೆದಿದೆ.

ವೈಶಾಲಿ ಜಿಲ್ಲೆ ಬಿಹಾರಿ ಗ್ರಾಮದಲ್ಲಿ ಇಂತಹದೊಂದು ನೀಚ ಕೃತ್ಯ ನಡೆದಿದೆ. ಪಾಟ್ನಾ ನಗರದ ಕೌನ್ಸಿಲರ್ ಮೊಹ್ಮದ್ ಖುರ್ಷಿದ್ ಹಾಗೂ ಆತನ ಸಹಚರರು, ತಾಯಿ, ಮಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಅವರ ತಲೆ ಬೋಳಿಸಿ ಮೆರವಣಿಗೆ ಮಾಡಿದ್ದಾರೆ ಅಂತಾ ಪೊಲೀಸ್ರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೌನ್ಸಲರ್ ಮೊಹ್ಮದ್ ಖುರೇಷಿ, ಕ್ಷೌರಿಕ ಸೇರಿದಂತೆ ಮೂವರನ್ನ ಬಂಧಿಸಲಾಗಿದೆ. ಐದಾರು ಮಂದಿಯ ಗುಂಪು ಮನೆಗೆ ನುಗ್ಗಿ, ಇತ್ತೀಚೆಗಷ್ಟೇ ಮದುವೆಯಾದ ನವವಧು ಮೇಲೆ ಅತ್ಯಾಚಾರಕ್ಕೆ ಯತ್ನಿಸಿದೆ. ಮಗಳ ರಕ್ಷಣೆಗೆ ಬಂದ ತಾಯಿ ಮೇಲೆ ಹಲ್ಲೆ ಮಾಡಲಾಗಿದೆ. ಬಳಿಕ ಅವರನ್ನ ಮನೆಯಿಂದ ಹೊರಗೆ ಎಳೆದು ತಂದು ತಲೆ ಬೋಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಗಿದೆ ಅಂತಾ ಪೊಲೀಸ್ರು ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಅಂತಾ ಭಗವಾನಪುರ ಠಾಣೆಯ ಅಧಿಕಾರಿ ಸಂಜಯಕುಮಾರ ತಿಳಿಸಿದ್ದಾರೆ.

ಆದ್ರೆ, ಈ ಬಗ್ಗೆ ಆರೋಪಿಗಳು ಗ್ರಾಮದಲ್ಲಿ ಬೇರೆ ರೀತಿ ಹೇಳಿದ್ದಾರೆ. ಇವರು ವೇಶ್ಯಾವಾಟಿಕೆ ದಂಧೆ ನಡೆಸ್ತಿದ್ರು ಅಂತಾ ಹೇಳಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳ್ತಿದ್ದಾರೆ. ಬಿಹಾರ ರಾಜ್ಯ ಇಂಥಾ ಅಪರಾಧ ಕೆಲಸದಿಂದಲೇ ಕುಖ್ಯಾತಿಯನ್ನ ಪಡೆಯುತ್ತಿದೆ. ನೀತಿಶಕುಮಾರ ಸರ್ಕಾರ ಇಂಥಾ ನೀಚರನ್ನ ಮಟ್ಟಹಾಕಬೇಕಿದೆ.


TAG


Leave a Reply

Your email address will not be published. Required fields are marked *

error: Content is protected !!