ಇಂದು ಬರೋಬ್ಬರಿ 9058 ಕೋವಿಡ್ ಪ್ರಕರಣಗಳು ಪತ್ತೆ

263

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿಂದು ಬರೋಬ್ಬರಿ 9058 ಕೋವಿಡ್ 19 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ 3,51,481 ಸೋಂಕು ಪ್ರಕರಣಗಳು ದಾಖಲಾಗಿವೆ. ಇಂದು 5,159 ಜನರು ಡಿಸ್ಚಾರ್ಜ್ ಆಗಿದ್ದು, ಇದುವರೆಗೂ 2,54,626 ಜನರು ಗುಣಮುಖರಾಗಿದ್ದಾರೆ.

ಇನ್ನು 90,999 ಪ್ರಕರಣಗಳು ಸಕ್ರಿಯವಾಗಿವೆ. ಇಂದು 135 ಜನರು ಸಾವನ್ನಪ್ಪಿದ್ದು, 5,837ಕ್ಕೆ ಏರಿಕೆಯಾಗಿದೆ. 762 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾವಾರು ಸೋಂಕಿತರ ವಿವರ ಹೀಗಿದೆ..

ಬಾಗಲಕೋಟೆ 136, ಬಳ್ಳಾರಿ 393, ಬೆಳಗಾವಿ 316, ಬೆಂ.ಗ್ರಾ 145, ಬೆಂ.ನ 2,967, ಬೀದರ 63, ಚಾಮರಾಜನಗರ 49, ಚಿಕ್ಕಬಳ್ಳಾಪುರ 106, ಚಿಕ್ಕಮಗಳುರು 210, ಚಿತ್ರದುರ್ಗ 164, ದ.ಕ 352, ದಾವಣಗೆರೆ 289, ಧಾರವಾಡ 199, ಗದಗ 194, ಹಾಸನ 461, ಹಾವೇರಿ 153, ಕಲಬುರಗಿ 220, ಕೊಡಗು 54, ಕೋಲಾರ 64, ಕೊಪ್ಪಳ 195, ಮಂಡ್ಯ 197, ಮೈಸೂರು 737, ರಾಯಚೂರು 245, ರಾಮನಗರ 105, ಶಿವಮೊಗ್ಗ 233, ತುಮಕೂರು 327, ಉಡುಪಿ 161, ಉ.ಕ 114, ವಿಜಯಪುರ 67, ಯಾದಗಿರಿ 142 ಪ್ರಕರಣಗಳೊಂದಿಗೆ 9058 ಜನರಲ್ಲಿ ಸೋಂಕು ಪತ್ತೆಯಾಗಿವೆ.




Leave a Reply

Your email address will not be published. Required fields are marked *

error: Content is protected !!