ಮಹಿಳೆ ಹೊಟ್ಟೆಯಲ್ಲಿತ್ತು ಬರೋಬ್ಬರಿ 4 ಅಡಿ ಉದ್ದದ ಹಾವು

596

ವಿಚಿತ್ರ ಸುದ್ದಿ

ಡಾಗೆಸ್ತಾನ್: ಇದನ್ನ ಓದುವ ನಿಮ್ಗೆ ನಂಬುವುದಕ್ಕೆ ಕಷ್ಟವಾಗಬಹುದು ಅಥವಾ ಇದೊಂದು ಸುಳ್ ಸುದ್ದಿ ಇರಬಹುದು ಎಂದು ಹೇಳಬಹುದು. ಆದ್ರೆ, ಇದು ಖಂಡಿತ ಸುಳ್ ಸುದ್ದಿಯಲ್ಲ. ಬರೋಬ್ಬರಿ 4 ಅಡಿ ಉದ್ದದ ಹಾವೊಂದು ಮಹಿಳೆಯ ಹೊಟ್ಟೆಯೊಳಗೆ ಹೋಗಿದ್ದು, ಅದನ್ನ ಹೊರ ತೆಗೆಯಲಾಗಿದೆ.

ರಷ್ಯಾದ ಡಾಗೆಸ್ತಾನ್ ದಲ್ಲಿ ಈ ಒಂದು ವಿಚಿತ್ರ ಘಟನೆ ನಡೆದಿದೆ. ಸೋಮವಾರ ಮಹಿಳೆಯೊಬ್ಬರು ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಬಂದಿದ್ದಾಳೆ. ವೈದ್ಯರು ಪರೀಕ್ಷೆ ಮಾಡಿದ್ದಾರೆ. ಮಹಿಳೆ ಹೊಟ್ಟೆಯಲ್ಲಿ ಯಾವುದೋ ವಸ್ತು ಇರುವುದು ತಿಳಿದಿದೆ. ನಂತರ ಮಹಿಳೆಯನ್ನ ಪ್ರಜ್ಞಾಹೀನಗೊಳಿಸಿ ಮಹಿಳೆಯ ಬಾಯಿಯಿಂದ ಬರೋಬ್ಬರಿ 4 ಅಡಿ ಉದ್ದದ ಹಾವೊಂದನ್ನ ಹೊರ ತೆಗೆದಿದ್ದಾರೆ. ಅದರ ವಿಡಿಯೋ ಸಹ ಇಲ್ಲಿದೆ ನೋಡಿ.

ಈ ಮಹಿಳೆ ತನ್ನ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆದಿದ್ದಾಳೆ. ಮಲಗಿದಾಗ ಆಕೆಯ ಬಾಯಿ ತೆಗೆದಿದ್ದ ಪರಿಣಾಮ ಹಾವು ಹೊಟ್ಟೆ ಸೇರಿದ್ದು, ಬೆಳಗ್ಗೆ ಎದ್ದಾಗ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎನ್ನಲಾಗ್ತಿದೆ. ಈ ಬಗ್ಗೆ ಡೈಲ್ ಮೇಲ್ ಸಹ ವರದಿ ಮಾಡಿದೆ.




Leave a Reply

Your email address will not be published. Required fields are marked *

error: Content is protected !!