120 ವರ್ಷಗಳಲ್ಲಿಯೇ ದಾಖಲೆಯ ಮಳೆ

367

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಆಗಸ್ಟ್ ನಲ್ಲಿ ವಾಡಿಕೆಗಿಂತ ಶೇಕಡ 27ರಷ್ಟು ಅಧಿಕ ಮಳೆಯಾಗಿದೆ. 120 ವರ್ಷಗಳ ಅವಧಿಯಲ್ಲಿಯೇ ಈ ಬಾರಿ ದಾಖಲೆಯ ಪ್ರಮಾಣದ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಕಳೆದ 120 ವರ್ಷಗಳಲ್ಲಿ 4 ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಅದರಲ್ಲಿ ಆಗಸ್ಟ್ ನಲ್ಲಿ ಅಧಿಕವಾಗಿದೆ ಎಂದು ತಿಳಿದು ಬಂದಿದೆ. ಜೂನ್ 1 ರಿಂದ ಸೆಪ್ಟೆಂಬರ್ 30ರ ತನಕ ಮಳೆಗಾಲ ಇರುತ್ತೆ. ಇದರಲ್ಲಿ ಆಗಸ್ಟ್ 31ರ ತನಕ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಎಂದು ಕೇಂದ್ರ ಹವಾಮಾನ ಇಲಾಖೆ ವಿಜ್ಞಾನಿಗಳು ತಿಳಿಸಿದ್ದಾರೆ.

ಬಂಗಾಳಕೊಲ್ಲಿಯಲ್ಲಿ ಐದು ಕಡೆ ವಾಯುಭಾರ ಕುಸಿತ ಉಂಟಾಗಿದೆ. ಇದರ ಪರಿಣಾಮ ಆಗಸ್ಟ್ ನಲ್ಲಿ ದಾಖಲೆ ಮಟ್ಟದಲ್ಲಿ ಮಳೆಯಾಗಿದೆ ಎಂದು ಸ್ಕೈಮೆಟ್ ವೆದರ್ ಸಂಸ್ಥೆ ತಿಳಿಸಿದೆ.




Leave a Reply

Your email address will not be published. Required fields are marked *

error: Content is protected !!