ಬಹಿರಂಗ ಪ್ರಚಾರಕ್ಕೆ ಇಂದು ರಾತ್ರಿ ತೆರೆ

342

ಸಿಂದಗಿ: ಪಟ್ಟಣದ ಪುರಸಭೆ ಚುನಾವಣಗೆ ಸಂಬಂಧಿಸಿದಂತೆ ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ರಾತ್ರಿ 10 ಗಂಟೆಗೆ ಪ್ರಚಾರ ಮುಕ್ತಾಯವಾಗ್ತಿದೆ. ಅಧಿಕೃತವಾಗಿ ನಾಳೆ ಬೆಳಗ್ಗೆ 7ಗಂಟೆಗೆ ಮುಗಿಯುತ್ತೆ. ಆದ್ರೆ, ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆವರೆಗೂ ಟೈ ಇರುವುದ್ರಿಂದ, ನಾಳೆ ಬೆಳಗ್ಗೆ ಸಿಗೋದು ಕೇವಲ 1 ಗಂಟೆ ಸಮಯ ಮಾತ್ರ. ಹೀಗಾಗಿ ಇಂದು ರಾತ್ರಿ 10 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ ಅಂತಾ ಚುನಾವಣಾ ಅಧಿಕಾರಿಗಳಾಗಿರುವ ತಹಶೀಲ್ದಾರ್ ಬಿ.ಎಸ್ ಕಡಕಭಾವಿ ಅವರು ಹೇಳಿದ್ದಾರೆ.

ನಾಳೆಯಿಂದ ಅಭ್ಯರ್ಥಿಗಳು ಮನೆ ಮನೆ ಪ್ರಚಾರ ನಡೆಸಲಿದ್ದಾರೆ. 48 ಗಂಟೆಗಳ ಕಾಲ ತಮ್ಮ ವಾರ್ಡ್ ವ್ಯಾಪ್ತಿಯ ಮತದಾರರ ಮನೆ ಮನೆಗೆ ತೆರಳಿ ವೋಟ್ ನೀಡಿಯೆಂದು ಮನವಿ ಮಾಡಿಕೊಳ್ಳಲಿದ್ದಾರೆ. ಫೆಬ್ರವರಿ 9 ಭಾನುವಾರ ಮತದಾನ ನಡೆಯಲಿದೆ.




Leave a Reply

Your email address will not be published. Required fields are marked *

error: Content is protected !!