ಸಿಡಿಲಿಗೆ ಮೂವರು ಬಲಿ

405

ಕಲಬುರಗಿ: ಸಿಡಿಲಿಗೆ ಮನೆ ಬಿದ್ದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಮೂವರು ಸಾವನ್ನಪ್ಪಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಮಂಗಲಗಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಸಿಡಿಲಿಗೆ ಮನೆ ಬಿದ್ದ ಪರಿಣಾಮ 12 ವರ್ಷದ ಅಲ್ದಿಯಾ, 10 ವರ್ಷದ ಶಫಿಕ್ ಹಾಗೂ 60 ವರ್ಷದ ಅಬಿದಾಭಿ ಸಾವನ್ನಪ್ಪಿದ ದುರ್ದೈವಿಗಳು. ಇಪ್ತಿಯಾರ್ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಮಂಗಲಗಿ ಗ್ರಾಮಕ್ಕೆ ಬಂದಿದ್ದರು. ಮೂವರು ಸಹ ಸಂಬಂಧಿಕರು ಅನ್ನೋದು ತಿಳಿದು ಬಂದಿದೆ. ಕುಟುಂಬಸ್ಥರ ಗೋಳು ಮುಗಿಲು ಮುಟ್ಟಿತ್ತು..

ಕುಸಿದು ಬಿದ್ದ ಮನೆ

ಇನ್ನು ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು ಸೇಡಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.




Leave a Reply

Your email address will not be published. Required fields are marked *

error: Content is protected !!