ಇಂದು ಮೊದಲ ಸಿಪಿಪಿ ಸಭೆ

520

ನವದೆಹಲಿ: ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ತನ್ನ ಮೊದಲ ಸಿಪಿಪಿ ಸಭೆಯನ್ನ ಇಂದು ನಡೆಸಲಿದೆ. ರಾಹುಲ್ ಗಾಂಧಿ ರಾಜೀನಾಮೆ ನೀಡುತ್ತೇನೆ ಅಂತಾ ಹೇಳಿದ ಇಷ್ಟು ದಿನಗಳ ಬಳಿಕ ಮೊದಲ ಸಭೆ ನಡೆಯುತ್ತಿದೆ. ಇದರಲ್ಲಿ ಸಿಪಿಪಿ ಮುಖ್ಯಸ್ಥೆ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ನ ಹಿರಿಯ ನಾಯಕರು ಸೇರಿದಂತೆ 52 ಕಾಂಗ್ರೆಸ್ ಸಂಸದರು ಭಾಗವಹಿಸಲಿದ್ದಾರೆ.

ಲೋಕ ಸಮರವಾದ್ಮೇಲೆ ನಡೆಸ್ತಿರುವ ಮೊದಲ ಕಾಂಗ್ರೆಸ್ ಸಂಸದೀಯ ಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಯಾರು ಅನ್ನೋ ತೀರ್ಮಾನವಾಗಲಿದೆ. ಈ ಬಗ್ಗೆ ರಾಜ್ಯಸಭೆಯ ಮೂಲಗಳಿಂದ ಮಾಹಿತಿ ಬಂದಿದೆ. ಇದೇ ವೇಳೆ ಕೈ ಸಂಸದರು ಕೆಳಮನೆಯ ನಾಯಕರನ್ನ ಸಹ ಆಯ್ಕೆ ಮಾಡಲಿದ್ದಾರಂತೆ.

ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಸಭೆಯನ್ನ ಆಯೋಜನೆ ಮಾಡಲಾಗಿದೆ. ಕಾಂಗ್ರೆಸ್ ವರ್ಕಿಂಗ್ ಕಮಿಟಿ ಈಗಾಗ್ಲೇ ತಿರಸ್ಕಾರ ಮಾಡಿರುವ ರಾಹುಲ್ ಗಾಂಧಿ ರಾಜೀನಾಮೆ ವಿಚಾರ, ಇಂದು ಮತ್ತೆ ಚರ್ಚೆಗೆ ಬರುವ ಸಾಧ್ಯತೆ ಇದೆ ಎನ್ನಲಾಗ್ತಿದೆ.


TAG


Leave a Reply

Your email address will not be published. Required fields are marked *

error: Content is protected !!