ವಿಚಿತ್ರ ಎನಿಸಿದರೂ ಸತ್ಯ, ರೈಲನ್ನೇ ತಳ್ಳಿದ ಜನರು

717

ಪ್ರಜಾಸ್ತ್ರ ಸುದ್ದಿ

ಸಾಮಾನ್ಯವಾಗಿ ನಾವು ಕಾರು, ಆಟೋ, ಬಸ್, ಜೀಪ್ ತರಹದ ವಾಹನಗಳನ್ನು ತಳ್ಳಿದ್ದನ್ನು ನೋಡಿದ್ದೇವೆ. ಆದ್ರೆ, ಇಲ್ಲಿನ ಜನರು ರೈಲನ್ನೇ ತಳ್ಳಿದ್ದಾರೆ. ಇದು ವಿಚಿತ್ರ ಎನಿಸಿದರೂ ಸತ್ಯ. ಮಧ್ಯಪ್ರದೇಶದ ಹರ್ಡಾದ್ ರೈಲ್ವೆ ನಿಲ್ದಾಣದಲ್ಲಿ ಟವರ್ ವ್ಯಾಗನ್ ನಲ್ಲಿ ದೋಷ ಕಂಡು ಬಂದಿದೆ. ಇದರಿಂದಾಗಿ ಟ್ರೇನ್ ಮುಂದಕ್ಕೆ ಸಾಗಿಲ್ಲ.

ಇದೆ ಹಳಿಯ ಮೇಲೆ ಇಟಾರಸಿಯಿಂದ ಪವನ್ ಎಕ್ಸ್ ಪ್ರೆಸ್ ಟ್ರೇನ್ ಬರುತಿತ್ತು. ಅದನ್ನು ಮಧ್ಯದಲ್ಲಿಯೇ ನಿಲ್ಲಿಸಲಾಗಿದೆ. ಈ ರೀತಿಯ ಸಮಸ್ಯೆ ಎದುರಾದಾಗ ಯಂತ್ರಗಳ ಸಹಾಯದಿಂದ ಟ್ರೇನ್ ಎಳೆಯಲಾಗುತ್ತೆ. ಆದ್ರೆ, ಇಲ್ಲಿ ಜನರೇ ಟ್ರೇನ್ ತಳ್ಳಿದ್ದು ವಿಡಿಯೋ ವೈರಲ್ ಆಗಿದೆ.




Leave a Reply

Your email address will not be published. Required fields are marked *

error: Content is protected !!