ಹೀಗೆ ಬರುವ ಸಂದೇಶ ನಂಬಿ ಮೋಸ ಹೋಗಬೇಡಿ..

345

ಪ್ರಜಾಸ್ತ್ರ ಅಪರಾಧ ಸುದ್ದಿ

ಕೊಚ್ಚಿ: ನಿಮ್ಮ ಸಮೀಪದಲ್ಲಿಯೇ ಇರುವ ಯುವತಿಯರ ಜೊತೆಗೆ ಸ್ನೇಹ, ಪ್ರೀತಿ, ಡೇಟಿಂಗ್, ಚಾಟ್ ಮಾಡಲು ಈ ನಂಬರ್ ಗೆ ಕಾಲ್ ಮಾಡಿ ಅನ್ನೋ ಸಂದೇಶ ಹೊತ್ತು ಬರುವ ಮೆಸೇಜ್ ಗಳನ್ನು ನಂಬುವ ಮೊದಲು ಎಚ್ಚರಿಕೆಯಿಂದ ಇರಿ.

ಈ ರೀತಿಯಾಗಿ ಮೆಸೇಜ್ ಕಳುಹಿಸಿ ಹುಡುಗರನ್ನು ವಂಚಿಸುವ ಜಾಲವೊಂದನ್ನು ಕೇರಳ ಪೊಲೀಸರು ಪತ್ತೆ ಹಚ್ಚಿದ್ದಾರೆ. ನಿತ್ಯ ಸಾವಿರಾರು ಜನಕ್ಕೆ ಹೀಗೆ ಮೆಸೇಜ್ ಕಳುಹಿಸುತ್ತಾರೆ. ಇದರಲ್ಲಿ ಕೆಲವರಾದ್ರೂ ಸಿಗುತ್ತಾರೆ. ಅಂತವರೊಂದಿಗೆ ಮಾತ್ನಾಡುವಾಗ ರೆಕಾರ್ಡ್ ಮಾಡಿಕೊಳ್ಳುತ್ತಾರೆ. ನಂತರ ಅವರನ್ನ ಬ್ಲಾಕ್ ಮೇಲ್ ಮಾಡಲು ಶುರು ಮಾಡುತ್ತಾರೆ.

ಮೋಸ ಹೋದವರು ಪೊಲೀಸರಿಗೆ ದೂರು ನೀಡುವುದಿಲ್ಲ ಎನ್ನುವುದೇ ಇಂತಹ ಮೋಸದ ಜಾಲದವರಿಗೆ ಲಾಭವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಹಣ ಲಪಾಟಿಸುತ್ತಾರೆ. ಹೀಗಾಗಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!