ಬಾಲಕಿ ಬಲಿ ಪಡೆದ ಚಿರತೆಗೆ ಕಂಡಲ್ಲಿ ಗುಂಡು ಆದೇಶ

353

ತುಮಕೂರು: ಮೂರು ವರ್ಷದ ಬಾಲಕಿ ಚಂದನಾಳನ್ನು ಬಲಿ ಪಡೆದ ಚಿರತೆಗೆ ಕಂಡಲ್ಲಿ ಗುಂಡಿಕ್ಕಲು ಆದೇಶ ನೀಡಲಾಗಿದೆ. ಈ ಬಗ್ಗೆ ತಾಲೂಕಿನ ಬೈಚೇನಹಳ್ಳಿಯಲ್ಲಿ ಮಾತ್ನಾಡಿರುವ ಅರಣ್ಯ ಸಚಿವ ಆನಂದ ಸಿಂಗ್, ಚಿರತೆ ಕಂಡಲ್ಲಿ ಗುಂಡಿಕ್ಕಲು ಆದೇಶಿಸಲಾಗಿದೆ ಎಂದರು.

ಇನ್ನು ಬಾಲಕಿ ಕುಟುಂಬಕ್ಕೆ 7.5 ಲಕ್ಷ ರೂಪಾಯಿ ಪರಿಹಾರ. ಐದು ವರ್ಷಗಳ ಕಾಲ ಮಾಸಿಕ 2 ಸಾವಿರ ರೂಪಾಯಿ ಮಾಶಾಸನ ನೀಡಲು ಸರ್ಕಾರ ನಿರ್ಧರಿಸಿದೆ ಅಂತಾ ಹೇಳಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿ ಬಾಲಕಿಯ ಕುಟುಂಬಕ್ಕೆ ಸಾಂತ್ವಾನ ಹೇಳಿದ ಸಚಿವರು ಪರಿಹಾರ ವಿತರಿಸಿದ್ದಾರೆ. ಈ ವೇಳೆ ಗ್ರಾಮಸ್ಥರಿಂದ ಸಚಿವರು ಧಿಕ್ಕಾರದ ಕೂಗು ಕೇಳಬೇಕಾಯ್ತು.

ಬೈಚೇನಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಗಂಗಚಿಕ್ಕಣ್ಣ ಎಂಬುವರ ಮೊಮ್ಮಗಳು ಬಾಲಕಿ ಚಂದನಾ ನಿನ್ನೆ ರಾತ್ರಿ ಹೊರಗೆ ಆಟವಾಡ್ತಿದ್ದಾಗ ಸುಮಾರು 8 ಗಂಟೆ ಟೈಂನಲ್ಲಿ ಚಿರತೆ ಹೊತ್ತೊಯ್ದಿದೆ. ಬಳಿಕ ಬಾಲಕಿಯ ಶವ ಕಾಡಿನಲ್ಲಿ ಪತ್ತಾಗಿದೆ. ಎರಡು ತಿಂಗಳಲ್ಲಿ ಇಬ್ಬರು ಮಕ್ಕಳನ್ನು ಬಲಿ ಪಡೆದಿರುವ ಚಿರತೆಯನ್ನ ಕೊಲ್ಲುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಹೀಗಾಗಿ ಸಚಿವರು ಚಿರತೆಗೆ ಕಂಡಲ್ಲಿ ಗುಂಡಿಕ್ಕಲು ಆದೇಶಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!