ತಹಶೀಲ್ದಾರ್ ಕಚೇರಿ ಹತ್ತಿರ ಮಾತ್ರ ಅನಧಿಕೃತ ಅಂಗಡಿಗಳಿಲ್ಲ.. ಇಲ್ನೋಡಿ ಸ್ವಾಮಿ

468

ಪ್ರಜಾಸ್ತ್ರ ವಿಶೇಷ ವರದಿ, ಭಾಗ-5

ಸಿಂದಗಿ: ಕಳೆದ ನಾಲ್ಕು ದಿನಗಳಿಂದ ‘ಪ್ರಜಾಸ್ತ್ರ’ ಸತತವಾಗಿ, ತಹಶೀಲ್ದಾರ್ ಕಾಂಪೌಂಡ್ ಸುತ್ತಮುತ್ತ ಇರುವ ಅನಧಿಕೃತ ಅಂಗಡಿಗಳು ಹಾಗೂ ಅವುಗಳಿಗೆ ನೀಡಲಾಗಿರುವ ವಿದ್ಯುತ್ ಸಂಪರ್ಕದ ಕುರಿತು ಸ್ಟೋರಿ ಮಾಡುತ್ತಲೇ ಇದೆ. ಆದ್ರೆ, ಇದು ಬರೀ ಇಲ್ಲಿ ಮಾತ್ರವಲ್ಲ. ಪಟ್ಟಣದ ಹಲವು ಕಡೆ ಅನಧಿಕೃತ ಅಂಗಡಿಗಳಿವೆ, ವಿದ್ಯುತ್ ಸಂಪರ್ಕ ಇದೆ.

ಪಟ್ಟಣದ ಕೋರ್ಟ್ ಎದುರು, ಬಸ್ ನಿಲ್ದಾಣ ಭಾಗದಲ್ಲಿ, ವಿಜಯಪುರ ರೋಡ್, ಮೊರಟಗಿ ರಸ್ತೆ, ಗೋಲಗೇರಿ ರಸ್ತೆ, ವಿವೇಕಾನಂದ ಸರ್ಕಲ್ ಸೇರಿದಂತೆ ಬಹುತೇಕ ಕಡೆ ಅನಧಿಕೃತ ಅಂಗಡಿಗಳಿವೆ. ಅವುಗಳಿಗೆ ವಿದ್ಯುತ್ ಸಂಪರ್ಕ ಸಹ ಇದೆ. ಇದೆಲ್ಲವೂ ನಿನ್ನೆ ಮೊನ್ನೆಯಿಂದ ಇರುವುದಲ್ಲ. ವರ್ಷಾನುಗಳಿಂದ ಇರುವುದು.

ಈ ಬಗ್ಗೆ ಕೇಳಬೇಕಾದ ತಾಲೂಕು ಆಡಳಿತ, ಪುರಸಭೆ, ಕೆಇಬಿ ಅಷ್ಟೇ ಯಾಕೆ ಶಾಸಕರು ಸಹ ಮೌನಕ್ಕೆ ಜಾರಿದ್ದಾರೆ. ಜನಪ್ರತಿನಿಧಿಗಳು ಮೌನವಾಗಿರುವುದು ಅವರ ರಾಜಕೀಯಕ್ಕೆ. ವೋಟ್ ಬ್ಯಾಂಕ್ ಸಲುವಾಗಿ. ಅಧಿಕಾರಿಗಳು ಸೈಲೆಂಟ್ ಆಗಿರುವುದು ನೋಡಿದ್ರೆ, ಇಲ್ಲಿಗೆ ಬರುವ ಅಧಿಕಾರಿಗಳು, ಇಲ್ಲೇ ಠಿಕಾಣಿ ಹೂಡಿರುವ ಅಧಿಕಾರಿಗಳು ಇದರಲ್ಲಿ ಪಾಲುದಾರರು ಅನ್ನೋ ಪ್ರಶ್ನೆ ಮೂಡಿದೆ.

ಇಷ್ಟೆಲ್ಲ ಜಾಗದಲ್ಲಿ ಅನಧಿಕೃತವಾಗಿ ಅಂಗಡಿಗಳನ್ನ ಇಟ್ಟುಕೊಂಡು, ವಿದ್ಯುತ್ ಸಂಪರ್ಕ ಪಡೆದು ನಿತ್ಯ ಸಾವಿರಾರು ರೂಪಾಯಿ ವ್ಯಾಪಾರ ಮಾಡುವವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕಠಿಣ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವಾಗಿರುವುದಲ್ಲ, ಗೊತ್ತಿದ್ದು ಜಾಣ ಕುರುಡತನ ಪ್ರದರ್ಶನ ಮಾಡ್ತಿರುವುದು. ನಾಳೆ ಇವರೆಲ್ಲ ಈ ಜಾಗ ನಮಗೆ ಸೇರಿದ್ದು, ಇಷ್ಟು ವರ್ಷಗಳಿಂದ ಇಲ್ಲಿಯೇ ಇದ್ದೇವೆ. ಈ ಜಾಗವನ್ನ ನಮ್ಮ ಹೆಸರಿಗೆ ಮಾಡಬೇಕು ಎಂದು ಹೇಳಿದ್ರೆ, ಅಧಿಕಾರಿಗಳು ಏನು ಮಾಡ್ತಾರೆ ಅನ್ನೋ ಅನುಮಾನ ಬಂದಿದೆ.

ಹೀಗಾಗಿ ಪಟ್ಟಣದಲ್ಲಿ ಎಲ್ಲೆಲ್ಲ ಅನಧಿಕೃತ ಅಂಗಡಿಗಳಿವೆ, ಅವುಗಳಿಗೆ ವಿದ್ಯುತ್ ಸಂಪರ್ಕ ಇದೆ. ಅವುಗಳನ್ನ ಕೂಡಲೇ ತೆರವುಗೊಳಿಸಬೇಕಿದೆ. ಈ ಬಗ್ಗೆ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರು ಏನು ಹೇಳಲಿದ್ದಾರೆ ನೋಡೋಣ…

ವಿಶೇಷ ವರದಿ ಮುಂದುವರೆಯಲಿದೆ…




Leave a Reply

Your email address will not be published. Required fields are marked *

error: Content is protected !!