ಶಿವಣ್ಣನ ಬರ್ಥ್ ಡೇಗೆ ಭಜರಂಗಿ-2 ಗಿಫ್ಟ್ ಏನು?

339

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ಅಭಿನಯದ ಭಜರಂಗಿ-2 ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ. ಈಗಾಗ್ಲೇ ಮೊದಲ ಭಾಗ ಸಕ್ಸಸ್ ಕಂಡಿದೆ. ಎ.ಹರ್ಷಾ ನಿರ್ದೇಶನದ ಚಿತ್ರದ ಬಗ್ಗೆ ಶಿವಣ್ಣನ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕರೋನಾ ಒಂದು ಇಲ್ಲದಿದ್ರೆ, ಚಿತ್ರ ಈಗಾಗ್ಲೇ ಥಿಯೇಟರ್ ಗೆ ಲಗ್ಗೆ ಇಡ್ತಿತ್ತು.

ಈಗಾಗ್ಲೇ ಪೋಸ್ಟರ್, ಫಸ್ಟ್ ಲುಕ್ ಮೂಲಕ ಹವಾ ಕ್ರಿಯೇಟ್ ಮಾಡಿರುವ ಚಿತ್ರ, ಸಾಕಷ್ಟು ಸದ್ದು ಮಾಡಿದೆ. ಈಗ ಶಿವಣ್ಣನ ಹುಟ್ಟು ಹಬ್ಬದಂದು ಟೀಸರ್ ರಿಲೀಸ್ ಗೆ ಪ್ಲಾನ್ ಮಾಡಲಾಗಿದೆ. ಜುಲೈ 12 ನಟ ಶಿವರಾಜಕುಮಾರ ಹಟ್ಟು ಹಬ್ಬ. ಅಂದು ಬೆಳಗ್ಗೆ 11.30 ಟೀಸರ್ ರಿಲೀಸ್ ಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ.

ನಿರ್ದೇಶನ ಎ.ಹರ್ಷಾ ನಿರ್ದೇಶನದ ಭಜರಂಗಿ, ಅಂಜನಿಪುತ್ರ ಚಿತ್ರಗಳಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದು, ಯಶಸ್ಸು ತಂದುಕೊಟ್ಟಿವೆ. ಈಗ ಇದೆ ಜೋಡಿಯ ಮುಂದುವರೆದ ಚಿತ್ರವಿದು. ಇನ್ನು ಟಗರು ಚಿತ್ರದಲ್ಲಿ ಶಿವಣ್ಣನಿಗೆ ಜೋಡಿಯಾಗಿದ್ದ ಭಾವನಾ ಸ್ಕ್ರೀನ್ ಶೇರ್ ಮಾಡಿದ್ದು, ಆದಷ್ಟು ಬೇಗ ಸಿನಿಮಾ ತೆರೆಗೆ ಬರಲಿದೆ.




Leave a Reply

Your email address will not be published. Required fields are marked *

error: Content is protected !!