ಏಕರೂಪ ನಾಗರಿಕ ಸಂಹಿತೆ ಮಂಡನೆಗೆ ಸಿದ್ಧತೆ

186

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ದೇಶದಲ್ಲಿ ಕಳೆದ ಕೆಲ ದಿನಗಳಿಂದ ಏಕರೂಪ ನಾಗರಿಕ ಸಂಹಿತೆ ಕುರಿತು ಚರ್ಚೆ ನಡೆಯುತ್ತಿದೆ. ಭಾರತದಲ್ಲಿ ಎರಡೆರಡು ಕಾನೂನುಗಳು ಇರಬಾರದು. ಒಂದೇ ಕಾನೂನು ಇರಬೇಕು ಎಂದು ಪ್ರಧಾನಿ ಮೋದಿ ಇತ್ತೀಚೆಗೆ ಹೇಳಿದ್ದಾರೆ. ಹೀಗಾಗಿ ಏಕರೂಪ ನಾಗರಿಕ ಸಂಹಿತೆ (uniform civil code) ಮಂಡನೆಗೆ ಸಿದ್ಧತೆ ನಡೆದಿದೆಯಂತೆ.

ಸಂಸತ್ ಮುಂಗಾರು ಅಧಿವೇಶನದ ವೇಳೆ ಈ ಮಸೂದೆಯನ್ನು ಮಂಡಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆಯಂತೆ. ಹೀಗಾಗಿ ದೇಶದ ಜನರ ಅಭಿಪ್ರಾಯ ಪಡೆಯಲು ಪ್ರಯತ್ನಿಸಿದೆ. ಭಾರತೀಯ ಮಸ್ಲಿಂ ಕಾನೂನು ಮಂಡಳಿ ಈ ಕುರಿತು ಚರ್ಚೆ ನಡೆಸಿದೆ. ವಿಪಕ್ಷಗಳ ವಿರೋಧ ವ್ಯಕ್ತಪಡಿಸಿವೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದ್ದು, ಈ ಮಸೂದೆ ಮಂಡನೆಯಾದರೆ ಯಾರಿಗೆ ಎಷ್ಟು ಲಾಭ ಅನ್ನೋ ಚರ್ಚೆ ಸಹ ಇದರ ಹಿಂದಿದೆ.




Leave a Reply

Your email address will not be published. Required fields are marked *

error: Content is protected !!