‘ಇಲ್ಲಿ ಪ್ರತಿಭೆ ನೋಡಲ್ಲ, ಸ್ತನ, ಸೊಂಟ, ಮುಖ ನೋಡುತ್ತಾರೆ’

221

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸಿನಿಮಾ ಜಗತ್ತಿನ ಬಗ್ಗೆ ಸದಾ ಒಂದಲ್ಲ ಒಂದು ಅಪವಾದ ಕೇಳಿ ಬರುತ್ತೆ. ಅದು ಅಲ್ಲಿನವರಿಂದಲೇ. ಕಣ್ಮಕ್ಕಳಿಗೆ ಸಿನಿ ದುನಿಯಾದಲ್ಲಿ ಕಾಸ್ಟಿಂಗ್ ಕೌಚ್ ಮೊದಲಿನಿಂದಲೂ ಇದೆ ಎಂದು ಹೇಳಲಾಗುತ್ತಿದೆ. ಅದನ್ನು ಮೀರಿ ನಿಂತವರು ಎಷ್ಟೋ, ಅದರಿಂದ ಹಾಳಾದವರೆಷ್ಟೋ. ಒಂದು ಕಾಲದಲ್ಲಿ ಬಾಲಿವುಡ್ ನಲ್ಲಿ ಸ್ಟಾರ್ ಆಗಿ ಮೆರೆದ ಹಿರಿಯ ನಟಿ ಜೀನತ್ ಅಮಾನ್ ಕೆಲ ಮಾತುಗಳನ್ನು ಹೇಳಿದ್ದಾರೆ.

ಜನರು ಹೆಚ್ಚಿಗೆ ಹೆಣ್ಮಕ್ಕಳ ಪ್ರತಿಭೆಗಿಂತ ಸ್ತನ, ಸೊಂಟ, ಮುಖ ನೋಡುತ್ತಾರೆ. ಚಿತ್ರರಂಗದಲ್ಲಿ ಅವಕಾಶಕ್ಕಾಗಿ ಹೆಣ್ಮಕ್ಕಳು ನಿರ್ದೇಶಕ, ನಿರ್ಮಾಪಕ, ನಟರೊಂದಿಗೆ ಸರಿದೂಗಿಸಿಕೊಂಡು ಹೋಗಬೇಕಾಗುತ್ತೆ ಅಂತಾ ಹೇಳಿದ್ದಾರೆ. ಇಲ್ಲಿ ಸ್ಲಿಮ್ ವೇಸ್ಟ್, ಸೆಕ್ಸಿ ಫಿಗರ್ ಹೊಂದಿರುವ ಹುಡಗೀಯರಿಗೆ ಅವಕಾಶ ಹೆಚ್ಚು ಎಂದಿದ್ದಾರೆ.

ಈ ವಾಸ್ತವತೆಯನ್ನು ತಿಳಿದುಕೊಂಡು ನನ್ನ ನೋಟವನ್ನೇ ಬಂಡವಾಳ ಮಾಡಿಕೊಂಡೆ. ಅಂತಹ ಪಾತ್ರಗಳನ್ನು ಆಯ್ಕೆ ಮಾಡಿಕೊಂಡೆ. ನನ್ನ ಕೆಲಸದ ಬಗ್ಗೆ ನನಗೆ ಪಶ್ಚಾತಾಪವಿಲ್ಲ ಅಂತಾ ಹಿರಿಯ ನಟಿ ಜೀನತ್ ಅಮಾನ್ ಹೇಳಿದ್ದಾರೆ.

1971ರಲ್ಲಿ ಹಲ್ಚಲ್ ಚಿತ್ರದ ಮೂಲಕ ನಟಿ ಜೀನತ್ ಸಿನಿ ಬದುಕು ಶುರು ಮಾಡಿದರು. ಡಾನ್, ದೋಸ್ತಾನ, ಸತ್ಯಂ ಶಿವಂ ಸುಂದರಂ, ಯಾದೋ ಕಿ ಬಾರತ್ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದರು. ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ನಿಂದ ಹಿಡಿದು ಫಿರೋಜ್ ಖಾನ್ ತನಕ ಎಲ್ಲರೊಂದಿಗೆ ನಟಿಸಿ ಮೆಗಾ ಸ್ಟಾರ್ ನಟಿಯಾದರು. ವೆಬ್ ಚಿತ್ರದಲ್ಲಿ ನಟಿಸಲು ಸಜ್ಜಾಗಿರುವ ಜೀನತ್ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!