ಗುಮ್ಮಟನಗರಿಯಲ್ಲಿಂದು 134 ಸೋಂಕಿತರು.. ತಾಲೂಕಾವಾರು ಲಿಸ್ಟ್ ಇಲ್ಲಿದೆ..

477

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಜಿಲ್ಲೆಯಲ್ಲಿ ಇಂದು 134 ಜನರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ. ಇದರೊಂದಿಗೆ 6,206ಕ್ಕೆ ಏರಿಕೆಯಾಗಿದೆ. ಇದುವರೆಗೂ 68,478 ಜನರಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ. ಇನ್ನು ಇಂದು 176 ಜನರು ಡಿಸ್ಚಾರ್ಜ್ ಆಗಿದ್ದು ಇದುವರೆಗೂ 5,279 ಜನರು ಗುಣಮುಖರಾಗಿದ್ದಾರೆ.

ಇಂದು 3 ಜನರು ಸಾವನ್ನಪ್ಪಿದ್ದು ಸಾವಿನ ಸಂಖ್ಯೆ 91ಕ್ಕೆ ಏರಿಕೆಯಾಗಿದೆ. ಇನ್ನು 836 ಪ್ರಕರಣಗಳು ಸಕ್ರಿಯವಾಗಿವೆ. ತಾಲೂಕಾವಾರು ಸೋಂಕಿತರ ಲಿಸ್ಟ್ ಹೀಗಿದೆ..

ವಿಜಯಪುರ 3,326, ಮುದ್ದೇಬಿಹಾಳ 596, ಬಸವನಬಾಗೇವಾಡಿ 575, ಇಂಡಿ 532, ಸಿಂದಗಿ 515, ತಾಳಿಕೋಟಿ 198, ತಿಕೋಟಾ 76, ಬಬಲೇಶ್ವರ 65, ದೇವರಹಿಪ್ಪರಗಿ 59, ಕೊಲ್ಹಾರ 57, ಚಡಚಣ 35, ನಿಡಗುಂದಿ 35, ಇತರೆಡೆ 137 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಜಿಲ್ಲೆಯಲ್ಲಿ 6,206 ಜನರಲ್ಲಿ ಸೋಂಕು ಪತ್ತೆಯಾಗಿದೆ.




Leave a Reply

Your email address will not be published. Required fields are marked *

error: Content is protected !!