ಮಳೆಗಾಗಿ ಕಪ್ಪೆಗಳ ಮದುವೆ

133

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ಮಳೆಗಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಂದೊಂದು ರೀತಿಯ ಆಚರಣೆ ಮಾಡಲಾಗುತ್ತಿದೆ. ಮಳೆಗಾಗಿ ಕಪ್ಪೆಗಳ ಮದುವೆ, ಕತ್ತೆಗಳ ಮದುವೆ ಸಾಮಾನ್ಯ. ಅದರಂತೆ ಕಲಬುರಗಿಯಲ್ಲಿ ಕಪ್ಪೆಗಳ ಮದುವೆ ಮಾಡಿಸಿ ಊರಿಗೆಲ್ಲ ಊಟ ಹಾಕಿಸಲಾಗಿದೆ.

ತಾಲೂಕಿನ ಜಂಬಗಾ.ಬಿ ಗ್ರಾಮದಲ್ಲಿ ಕಪ್ಪೆಗಳ ಮದುವೆ ಮಾಡಲಾಗಿದೆ. ಶಾಸ್ತ್ರ ಸಂಪ್ರದಾಯದಂತೆ ಕಪ್ಪೆಗಳ ಮದುವೆ ಮಾಡಲಾಗಿದೆ. ಮಧು ಮಗಳು, ಮಧು ಮಗನ ಬೀಗರಿಗೆ ಸೀರಿ ಕೊಟ್ಟಿದ್ದಾರೆ. ಮನುಷ್ಯರ ಮದುವೆಯಂತೆ ಕಪ್ಪೆಗಳ ಮದುವೆ ಮಾಡಿ ಮಳೆಗಾಗಿ ಪ್ರಾರ್ಥಿಸಿದ್ದಾರೆ.

ರೈತರು ಬಿತ್ತನೆ ಮಾಡಿ ಆಕಾಶ ನೋಡುವ ಪರಿಸ್ಥಿತಿ ಇದೆ. ಜೂನ್ ತಿಂಗಳು ಕಳೆಯುತ್ತಾ ಬಂದರೂ ಮಳೆಯಾಗುತ್ತಿಲ್ಲ. ಇದರಿಂದಾಗಿ ರೈತರು ಕಂಗಾಲಾಗಿದ್ದಾರೆ. ಹೀಗಾಗಿ ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳ ಮದುವೆ ಮಾಡಲಾಗಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!