ಬ್ರೇಕಿಂಗ್ ನ್ಯೂಸ್
Search

ವಂದೇ ಭಾರತ್ ರೈಲು ಟಿಕೆಟ್ ದರ ಇಷ್ಟೊಂದಾ?

147

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ದೇಶದಲ್ಲಿ ವಂದೇ ಭಾರತ್ ರೈಲು ಎಲ್ಲಡೆ ಸಂಚರಿಸಲು ಶುರು ಮಾಡಿವೆ. ಹೀಗಾಗಿ ಪ್ರಧಾನಿ ಮೋದಿ ದೇಶದ ಬೇರೆ ಬೇರೆ ರಾಜ್ಯಗಳ ಜಿಲ್ಲೆಗಳ ನಡುವೆ ಸಂಚಾರಕ್ಕೆ ಚಾಲನೆ ನೀಡುತ್ತಿದ್ದಾರೆ. ಮಂಗಳವಾರ 5 ವಂದೇ ಭಾರತ್ ರೈಲಿಗೆ ಚಾಲನೆ ನೀಡಿದರು.

ಇದೇ ರೀತಿ ಬೆಂಗಳೂರು-ಧಾರವಾಡ ನಡುವೆ ಸಂಚರಿಸುವ ರೈಲಿಗೂ ಚಾಲನೆ ಸಿಕ್ಕಿದೆ. ಆದರೆ, ಈ ಟ್ರೇನ್ ದರ ಕೇಳಿ ಸಾಮಾನ್ಯ ಜನರು ಇದು ನಮಗೆ ಅಲ್ಲ ಅಂತಿದ್ದಾರೆ. ಯಾಕಂದರೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೇಂದ್ರ ರೈಲ್ವೆ ನಿಲ್ದಾಣದಿಂದ ಯಶವಂತಪುರಕ್ಕೆ ಬರಲು ಎಸಿ ಚೇರ್ ಕಾರಿನಲ್ಲಿ 410 ರೂಪಾಯಿ ಇದ್ದರೆ ಎಕ್ಸ್ ಕ್ಯೂಟಿವ್ ಕ್ಲಾಸ್ ನಲ್ಲಿ 545 ರೂಪಾಯಿದೆ. ಬಸ್ಸು, ಮೆಟ್ರೋ ಆದರೆ 15-20 ರೂಪಾಯಿಗೆ ಹೋಗಬಹುದು. ವಂದೇ ಭಾರತ್ ಎಕ್ಸ್ ಪ್ರೆಸ್ ಟ್ರೇನ್ ಬಡವ, ಮಧ್ಯಮವರ್ಗದವರಿಗೆಲ್ಲ ಅಂತಿದ್ದಾರೆ ಸಾರ್ವಜನಿಕರು.

ಎಕ್ಸ್ ಪ್ರೆಸ್ ಎಂದು ಹೇಳುವ ಟ್ರೇನ್ ಸಹ ಸುಮಾರು 6 ತಾಸಿಗೂ ಹೆಚ್ಚು ಕಾಲ ತೆಗೆದುಕೊಳ್ಳಲಿದೆ. ಹೀಗಿರುವಾಗ ಅಷ್ಟೊಂದು ಸಮಯ ಸಹ ಉಳಿದಂತೆ ಕಾಣುವುದಿಲ್ಲ. ಹೀಗಿದ್ದರೂ ಇಷ್ಟೊಂದು ದುಬಾರಿ ಟಿಕೆಟ್ ದರ ಮಾಡಿರುವುದಕ್ಕೆ ವಂದೇ ಭಾರತ್ ಟ್ರೇನ್ ಸಾಮಾನ್ಯ ಜನರಿಗೆ ಅಲ್ಲವೇ ಅಲ್ಲ ಅಂತಿದ್ದಾರೆ.




Leave a Reply

Your email address will not be published. Required fields are marked *

error: Content is protected !!