ವಿಷಅನಿಲ ದುರಂತ: ಏರುತ್ತಲೇ ಇದೆ ಸಾವಿನ ಸಂಖ್ಯೆ.. ಪಿಎಂ ತುರ್ತು ಸಭೆ

351

ವಿಶಾಖಪಟ್ಟಣಂ: ಇಲ್ಲಿನ ವೈಜಾಗ್ ನಲ್ಲಿ ನಡೆದ ವಿಷಅನಿಲ ಸೋರಿಕೆ ದುರಂತದಿಂದ ಸಾವಿನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. 800 ಮಂದಿ ಅಸ್ತವಸ್ಥಗೊಂಡಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ ಕರೆದಿದ್ದಾರೆ.

ಪ್ರಧಾನಿ ಮೋದಿ ನಡೆಸಿರುವ ಸಭೆಯಲ್ಲಿ ಸಚಿವರಾದ ಅಮಿತ ಶಾ, ರಾಜನಾಥ ಸಿಂಗ್, ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಭಾಗವಹಿಸಿದ್ದು, ಮುಂದಿನ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಘಟನೆ ಬಗ್ಗೆ ಆಂಧ್ರಪ್ರದೇಶ ಸಿಎಂ ಜಗನಮೋಹನ ರೆಡ್ಡಿ ಮಾಹಿತಿ ಸಂಗ್ರಹಿಸಿದ್ದು, ಕೇಂದ್ರವು ಅಗತ್ಯ ನೆರವು ನೀಡುವ ಭರವಸೆ ನೀಡಿದೆ.

ವಿಷಅನಿಲ ದುರ್ಘಟನೆಗೆ ಎಲ್.ಜಿ ಪಾಲಿಮರ್ಸ್ ಕಂಪನಿಯೇ ಹೊಣೆ ಎಂದು ಆಂಧ್ರ ಕೈಗಾರಿಕ ಸಚಿವ ಎಂ.ಜಿ ರೆಡ್ಡಿ ಹೇಳಿದ್ದಾರೆ. ಕಂಪನಿ ಮಾಲೀಕರು ಎಷ್ಟರ ಮಟ್ಟಿಗೆ ಮುಂಜಾಗ್ರತ ಕ್ರಮಗಳನ್ನ ತೆಗೆದುಕೊಂಡಿದ್ರು ಅನ್ನೋದು ತಿಳಿಸಬೇಕಿದೆ. ವಿಷಅನಿಲ ಗಾಳಿಗೆ ಸೇರಿದ್ದು ಸುತ್ತಮುತ್ತಲಿನ ಪ್ರದೇಶದ ಜನರಿಗೆ ಹಾನಿಯಾಗಲಿದೆ. ಹೀಗಾಗಿ ಕಾರ್ಖಾನೆ ವಿರುದ್ಧ ಕ್ರಿಮಿನಲ್ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!