ಮದುವೆ ಮನೆ ಊಟ, 68 ಜನರು ಆಸ್ಪತ್ರೆಗೆ ದಾಖಲು

318

ಪ್ರಜಾಸ್ತ್ರ ಸುದ್ದಿ

ಚಿಕ್ಕೋಡಿ: ಮದುವೆ ಮನೆಯ ಊಟ ಸೇವನೆ ಮಾಡಿದ ಬಳಿಕ 60ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡ ಘಟನೆ ತಾಲೂಕಿನ ಹಿರೇಕೋಡಿಯಲ್ಲಿ ನಡೆದಿದೆ. 52 ಮಂದಿಯನ್ನು ತಾಲೂಕು ಆಸ್ಪತ್ರೆಗೆ 16 ಜನರನ್ನು ವಿವಿಧ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಾಕೀರ್ ಪಟೇಲ್ ಎಂಬುವರ ಪುತ್ರಿ ಮದುವೆ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಬಾಡೂಟ ಆಯೋಜಿಸಲಾಗಿತ್ತು. ಬಂಧು ಬಳಗದವರು ಊಟ ಸವಿದಿದ್ದರು. ಸೋಮವಾರ ತಡರಾತ್ರಿಯೇ ಅನೇಕರಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!