ಗೆಲುವಿನ ಓಟ ಮುಂದುವರೆಸಿದ ಟೀಂ ಇಂಡಿಯಾ

331

ಪರ್ತ್: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮಹಿಳಾ ಟಿ-20 ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ 2ನೇ ಜಯ ಸಾಧಿಸಿದೆ. ಪರ್ತ್ ಸ್ಟೇಡಿಯಂನಲ್ಲಿ ಬಾಂಗ್ಲಾ ವಿರುದ್ಧ ನಡೆದ ಲೀಗ್ ಪಂದ್ಯದಲ್ಲಿ 18 ರನ್ ಗಳಿಂದ ಗೆಲುವು ದಾಖಲಿಸಿದೆ.

ಫಸ್ಟ್ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತ್ತು. ಶಫಾಲಿ ಶರ್ಮಾ ಗಳಿಸಿದ 39 ರನ್ ಗರಿಷ್ಠ ಮೊತ್ತವಾಗಿದೆ. ಸಾಧಾರಣ ಗುರಿಯನ್ನ ಚೇಸ್ ಮಾಡಿದ ಬಾಂಗ್ಲಾ ಆಟಗಾರರನ್ನ ಪೆವಿಲಿಯನ್ ಹಾದಿ ತೋರಿಸಿದ್ದು ಪೂನಂ ಯಾದವ. ಆಸೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ 4 ವಿಕೆಟ್ ಪಡೆದಿದ್ದ ಪೂನಂ ಯಾದವ ಈ ಪಂದ್ಯದಲ್ಲಿ 3 ವಿಕೆಟ್ ಪಡೆದು ಮಿಂಚಿದ್ರು.

ಶೇಖಾ ಪಾಂಡೆ 2, ಅರುಂಧತಿ ರೆಡ್ಡಿ 2 ಹಾಗೂ ಕನ್ನಡತಿ ರಾಜೇಶ್ವರಿ ಗಾಯಕ್ವಾಡ 1 ವಿಕೆಟ್ ಪಡೆದ್ರು. ಭಾರತ ತಂಡದ ಭರ್ಜರಿ ಬೌಲಿಂಗ್ ನಿಂದಾಗಿ ಬಾಂಗ್ಲಾ ವನಿತೆಯರು 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 124 ರನ್ ಗಳಿಸುವ ಮೂಲಕ ಸೋಲನ್ನ ಒಪ್ಪಿಕೊಂಡಿತು.




Leave a Reply

Your email address will not be published. Required fields are marked *

error: Content is protected !!